ADVERTISEMENT

ತುಮಕೂರು: ದೇಸಿ ರಂಗೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 8:00 IST
Last Updated 29 ಫೆಬ್ರುವರಿ 2024, 8:00 IST
ತುಮಕೂರು ತಾಲ್ಲೂಕಿನ ಮೆಳೇಹಳ್ಳಿಯಲ್ಲಿ ಮಂಗಳವಾರ ಮಾಲಾಶ್ರೀ ಮಳವಳ್ಳಿ ಅವರು ‘ಅನುರಕ್ತೆ’ ನಾಟಕ ಪ್ರಸ್ತುತ ಪಡಿಸಿದರು
ತುಮಕೂರು ತಾಲ್ಲೂಕಿನ ಮೆಳೇಹಳ್ಳಿಯಲ್ಲಿ ಮಂಗಳವಾರ ಮಾಲಾಶ್ರೀ ಮಳವಳ್ಳಿ ಅವರು ‘ಅನುರಕ್ತೆ’ ನಾಟಕ ಪ್ರಸ್ತುತ ಪಡಿಸಿದರು   

ತುಮಕೂರು: ಡಮರುಗ ರಂಗ ಸಂಪನ್ಮೂಲ ಕೇಂದ್ರದಿಂದ ತಾಲ್ಲೂಕಿನ ಮೆಳೇಹಳ್ಳಿಯಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ದೇಸಿ ರಂಗೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯ ಗುಬ್ಬಿ ವೀರಣ್ಣನವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿ ಹತ್ತಾರು ರಂಗತಂಡಗಳು ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿವೆ. ಮೆಳೇಹಳ್ಳಿಯಂತಹ ಪುಟ್ಟ ಹಳ್ಳಿಯ ಡಮರುಗ ತಂಡವೂ ಎಲ್ಲ ಕಡೆ ಗುರುತಿಸಿಕೊಳ್ಳುತ್ತಿದೆ’ ಎಂದರು.

ಮಧು ಮಳವಳ್ಳಿ ನಿರ್ದೇಶನದಲ್ಲಿ ಮೂಡಿ ಬಂದ ‘ಅನುರಕ್ತೆ’ ನಾಟಕವನ್ನು ರಂಗಬಂಡಿ ಮಳವಳ್ಳಿ ತಂಡದ ಮಾಲಾಶ್ರೀ ಮಳವಳ್ಳಿ ಪ್ರಸ್ತುತ ಪಡಿಸಿದರು.

ADVERTISEMENT

ಡಮರುಗ ರಂಗ ಸಂಪನ್ಮೂಲ ಕೇಂದ್ರದ ಸಂಸ್ಥಾಪಕ ಕಾರ್ಯದರ್ಶಿ ಮೆಳೇಹಳ್ಳಿ ದೇವರಾಜ್‌, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬೆಳ್ಳಾವಿ ಶಿವಕುಮಾರ್, ಆರ್ಥಿಕ ಸಾಕ್ಷರತಾ ಸಲಹೆಗಾರ ಎಸ್.ದಯಾನಂದ್, ಉಪನ್ಯಾಸಕಿ ಹೇಮಲತಾ, ನಿವೃತ್ತ ಶಿಕ್ಷಕ ಹನುಮಂತಯ್ಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.