ADVERTISEMENT

ರಾಜ್; ಕಲಾಪ್ರೇಮಿಗಳಿಗೆ ಸ್ಫೂರ್ತಿ

ನಗರದ ವಿವಿಧ ಕಡೆಗಳಲ್ಲಿ ವರನಟ ಡಾ.ರಾಜ್‌ಕುಮಾರ್ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 17:17 IST
Last Updated 24 ಏಪ್ರಿಲ್ 2019, 17:17 IST
ಡಾ.ರಾಜ್‌ಕುಮಾರ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರು ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಿಸಿದರು. ಹರಳೂರು ಶಿವಕುಮಾರ್ ಇದ್ದರು
ಡಾ.ರಾಜ್‌ಕುಮಾರ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರು ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಿಸಿದರು. ಹರಳೂರು ಶಿವಕುಮಾರ್ ಇದ್ದರು   

ತುಮಕೂರು: ‘ಡಾ.ರಾಜ್‌ಕುಮಾರ್ ಅವರ ಕಲಾಭಿಮಾನ, ಉತ್ಸಾಹವೇ ಕಲಾ ಪ್ರೇಮಿಗಳಿಗೆ ಸ್ಫೂರ್ತಿ ಆಗಿದೆ’ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜ್ ಹೇಳಿದರು.

ನಗರದ ಹೊರಪೇಟೆಯಲ್ಲಿರುವ ಮಧುರ ಟಿಫನ್ ರೂಂನಲ್ಲಿ ಜಿಲ್ಲಾ ಶತ ಶೃಂಗರಾಜ ಡಾ.ರಾಜ್‌ಕುಮಾರ್ ಕನ್ನಡ ಅಭಿಮಾನಿಗಳ ಸಂಘ, ಜಿಲ್ಲಾ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಯುವಸೇನೆ ಆಯೋಜಿಸಿದ್ಧ ಡಾ ರಾಜ್‌ಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹರಳೂರು ಕುಮಾರ್‌ ಅವರು ಕಳೆದ 25 ವರ್ಷಗಳಿಂದಲೂ ಡಾ.ರಾಜ್‌ಕುಮಾರ್ ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ. ಅವರ ಸಾವಿರಾರು ಅಭಿಮಾನಿಗಳಾಗಿ ಉಪಾಹಾರದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ’ ಎಂದು ತಿಳಿಸಿದರು.

ADVERTISEMENT

ಹರಳೂರು ಅಧ್ಯಕ್ಷ ಟಿ.ಜಿ ಶಿವಕುಮಾರ್ ಮಾತನಾಡಿ, ‘10 ವರ್ಷಗಳ ಹಿಂದೆಯೇ ರಾಜ್ ಅವರ ಬೆಳ್ಳಿ ಪುತ್ಥಳಿ ಮಾಡಿಸಲಾಯಿತು. ಈಗಲೂ ರಾಜ್‌ಕುಟುಂಬದವರಿಗೆ ನಮ್ಮ ಹೋಟೆಲ್‌ನ ತಿಂಡಿ ಎಂದರೆ ಇಷ್ಟ. ಕಳೆದ ಶನಿವಾರ ಶಿವರಾಜ್‌ಕುಮಾರ್ ಅವರು ಸಹ ನಮ್ಮ ಹೋಟೆಲ್‌ಗೆ ಬಂದು ತಿಂಡಿ ಸ್ವೀಕರಿಸಿದ್ದರು’ ಎಂದರು.

ಶತಶೃಂಗರಾಜ ಡಾ.ರಾಜ್‌ಕುಮಾರ್ ಕನ್ನಡ ಅಭಿಮಾನಿಗಳ ಸಂಘದ ಸದಸ್ಯರಾದ ಟಿ.ಜಿ ಬಸವರಾಜು, ಟಿ.ಸಿ ದಯಾನಂದ, ಟಿ. ಮೋಹನ್‌ಕುಮಾರ್ ಬಂಬೂ, ಟಿ.ಆರ್ ರಾಜೇಶ್, ಮದನ್‌ಕುಮಾರ್ ಪ್ರವೇಶ್, ಟಿ.ಎಸ್ ಮನೋಜ್‌ಕುಮಾರ್, ಟಿ.ಆರ್ ರವಿಕುಮಾರ್ ಅರಕೆರೆ, ಟಿ.ಎಂ ರವಿಕುಮಾರ್ ಮತ್ತು ಪ್ರತಾಪ್ ಮಲ್ಲಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.