ತುಮಕೂರು: ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಜಂಪೇನಹಳ್ಳಿ ಕ್ರಾಸ್ ಮತ್ತು ಕೋರಾ ಠಾಣೆ ವ್ಯಾಪ್ತಿಯ ಹನುಮಂತಗಿರಿಯಲ್ಲಿ ಗಾಂಜಾ ಸೊಪ್ಪನ್ನು ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 2 ಕೆ.ಜಿ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.
ಜಿ.ಮಂಜುನಾಥ್, ಮುನಿರಾಜು, ಚಿನ್ನರಾಮಾಂಜಿ, ಸೀತಾರಾಮಯ್ಯ ಬಂಧಿತರು. ಮಾರಪ್ಪ ಎಂಬಾತ ತಲೆಮರೆಸಿಕೊಂಡಿದ್ದಾರೆ. ರಾಮಾಂಜಿ ಶಿಡ್ಲಘಟ್ಟ ತಾಲ್ಲೂಕು ಗಂಜಲಗುಂಟೆ ಗ್ರಾಮದ ಮಾರಪ್ಪನಿಂದ ಗಾಂಜಾ ಸೊಪ್ಪನ್ನು ಖರೀದಿಸಿ ತುಮಕೂರು, ಕೊರಟಗೆರೆ, ಶಿರಾ ಮಧುಗಿರಿ ಸುತ್ತ ಮುತ್ತ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಇಎನ್ ಠಾಣಾ ಇನ್‌ಸ್ಪೆಕ್ಟರ್ ಎಂ.ವಿ.ಶೇಷಾದ್ರಿ, ಕೋರಾ ಪಿ.ಎಸ್.ಐ ಹರೀಶ್, ಸಿಇಎನ್ ಠಾಣಾ ಪಿ.ಎಸ್.ಐ ಶಮೀನ್ ಹಾಗೂ ಸಿಬ್ಬಂದಿಗಳಾದ ಎಸ್.ನಾಗರಾಜು, ಅಯೂಬ್ ಜಾನ್, ರಮೇಶ್, ಶಿವಶಂಕರ್, ಮಲ್ಲೇಶ್ , ರಮೇಶ್, ಶ್ರೀನಿವಾಸ್, ಕರೀಂ ಪಾಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.