ತುಮಕೂರು: ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೇಮಾ ಮಲ್ಲಣ್ಣ ದತ್ತಿನಿಧಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಮಂಗಳವಾರ ಬಹುಮಾನ ವಿತರಿಸಲಾಯಿತು.
ಪ್ರಥಮ ಬಹುಮಾನ ತೋವಿನಕೆರೆ ಗಿರಿಜಮ್ಮ, ದ್ವಿತೀಯ ಹೆಬ್ಬೂರು ಶಾಂತಲಕ್ಷ್ಮಿ, ತೃತೀಯ ಬಾಣಸಂದ್ರದ ಬಿ.ಆರ್.ಆಕಾಶ್, ಸಮಾಧಾನಕರ ಬಹುಮಾನವನ್ನು ನಗರದ ನಿದಾ ಆಫ್ರಿನ್ ಅವರಿಗೆ ನೀಡಿ ಗೌರವಿಸಲಾಯಿತು. ತಾಯಂದಿರ ದಿನಾಚರಣೆ ಪ್ರಯುಕ್ತ ‘ಮಾತೃತ್ವ, ನನ್ನ ಅನುಭವ’ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಬಹುಮಾನ ವಿತರಿಸಿದ ಸಿದ್ಧಗಂಗಾ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿ, ‘ಅಮ್ಮ ಎಷ್ಟು ಮುಖ್ಯವೋ ಅಪ್ಪನೂ ಅಷ್ಟೇ ಮುಖ್ಯ. ಹೆತ್ತರಷ್ಟೇ ಅಮ್ಮನಲ್ಲ. ಅಮ್ಮನ ಅಂತಃಕರಣ ಪೊರೆಯುವ ಗುಣ, ಮಾತೃ ಹೃದಯ ಇರುವವರೆಲ್ಲರೂ ಅಮ್ಮಂದಿರೇ’ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ‘ತಾಯಿಯ ಅಂತಃಕರಣ, ಪ್ರೀತಿಯ ಮೂಲಕ ಸಮಾಜವನ್ನು ತಿದ್ದಿ ಮುನ್ನಡೆಸೋಣ’ ಎಂಬ ಆಶಯ ವ್ಯಕ್ತಪಡಿಸಿದರು.
ದತ್ತಿ ದಾನಿ ಪ್ರೇಮಾ ಮಲ್ಲಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಕೋಚಿಂಗ್ ಸೆಂಟರ್ ಅಧ್ಯಕ್ಷ ಜಯಶೀಲ, ತೀರ್ಪುಗಾರರಾಗಿದ್ದ ಸಿ.ಎನ್.ಸುಗುಣಾದೇವಿ, ಸಿ.ಎಲ್.ಸುನಂದಮ್ಮ, ಸಂಘದ ಉಪಾಧ್ಯಕ್ಷರಾದ ಸಿ.ಎ.ಇಂದಿರಾ, ಲಲಿತ ಮಲ್ಲಪ್ಪ, ಶೈಲಜಾ, ಸುಮಾ ಬೆಳಗೆರೆ ಉಪಸ್ಥಿತರಿದ್ದರು. ನಾಗರಾಜು ಸ್ವಾಗತಿಸಿ, ಸುಮಾ ಪ್ರಸನ್ನ ನಿರೂಪಿಸಿದರು.
ಮನೆಕೆಲಸ ಮಾಡುತ್ತಾ ಕಷ್ಟಪಟ್ಟು ತನ್ನ ಮೂರು ಮಕ್ಕಳನ್ನು ವಿದ್ಯಾವಂತರಾಗಿ ಮಾಡಿದ ವರಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.