ADVERTISEMENT

ಬೀದಿ ಬದಿ ವ್ಯಾಪಾರಸ್ಥರಿಗೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 4:12 IST
Last Updated 1 ಜುಲೈ 2021, 4:12 IST
Tiptur Kobbari Stats 01.07.2021
Tiptur Kobbari Stats 01.07.2021   

ತುಮಕೂರು: ಮಹಾನಗರ ಪಾಲಿಕೆಯು ಜುಲೈ 1ರಿಂದ ಆ. 15ರ ವರೆಗೆ ಆಯೋಜಿಸಿರುವ ‘ಸಂಕಲ್ಪ ಸಿದ್ದಿ’ ವಿಶೇಷ ಮೇಳದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿರುವ 2,823 ಬೀದಿ ಬದಿ ವ್ಯಾಪಾರಿಗಳು ಕಿರುಸಾಲ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 2,207 ವ್ಯಾಪಾರಿಗಳಿಗೆ ತಲಾ ₹10 ಸಾವಿರ ಸಾಲ ನೀಡಲಾಗಿದೆ. ಸಾಲ ಮಂಜೂರಾಗಿ ವಿತರಣೆಯಾಗದೆ ಉಳಿದ ಬೀದಿ ಬದಿ ವ್ಯಾಪಾರಿಗಳಿಗೆ ಈ ವಿಶೇಷ ಮೇಳದಲ್ಲಿ ಸಾಲ ವಿತರಣೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

ಈಗಾಗಲೇ ಬ್ಯಾಂಕ್‍ಗಳಿಂದ ವಾಪಾಸಾಗಿರುವ ಸಾಲದ ಅರ್ಜಿಗಳನ್ನು ಮರುಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕ್‍ಗಳಿಗೆ ಸಲ್ಲಿಸಲು, ಹೊಸ ಅರ್ಜಿ ಸ್ವೀಕರಿಸಲು, ಕೋವಿಡ್–19 ಲಸಿಕೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.