ADVERTISEMENT

ಫಸಲ್ ಬಿಮಾ ಯೋಜನೆ:ಜಾಗೃತಿಗೆ ಬೀದಿ ನಾಟಕ, ಟ್ಯಾಬ್ಲೊಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:11 IST
Last Updated 4 ಜೂನ್ 2019, 20:11 IST
ಟ್ಯಾಬ್ಲೊಗೆ ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್ ಚಾಲನೆ ನೀಡಿದರು
ಟ್ಯಾಬ್ಲೊಗೆ ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್ ಚಾಲನೆ ನೀಡಿದರು   

ತುಮಕೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತ ಆಯೋಜಿಸಿರುವ ಬೀದಿ ನಾಟಕ ಮತ್ತು ಟ್ಯಾಬ್ಲೊಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಜಿಲ್ಲೆಯ ವಿವಿಧ ಹೋಬಳಿ ಕೇಂದ್ರಗಳಲ್ಲಿ ಬೀದಿ ನಾಟಕ ಮತ್ತು ಟ್ಯಾಬ್ಲೊ ಪ್ರದರ್ಶನ ಜೂನ್ 5ರಿಂದ 12ರವರೆಗೆ ನಡೆಯಲಿದೆ. ರೈತರು ಮಾಹಿತಿ ಪಡೆದು ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

‘ಜೂನ್ 5ರಂದು ತುಮಕೂರು ತಾಲ್ಲೂಕಿನ ಕೋರಾ, ಬೆಳ್ಳಾವಿ, ಹೆಬ್ಬೂರು ಹೋಬಳಿ, ಕೊರಟಗೆರೆ ತಾಲ್ಲೂಕಿನ ಕಸಬಾ, ಹೊಳವನಹಳ್ಳಿಯಲ್ಲಿ ಸಂಚರಿಸಲಿದೆ. ಜೂನ್ 6ರಂದು ಮಧುಗಿರಿ ತಾಲ್ಲೂಕಿನ ಕಸಬಾ, ಐ.ಡಿಹಳ್ಳಿ ಹಾಗೂ ಶಿರಾ ತಾಲ್ಲೂಕಿನ ಕಸಬಾ, ಬುಕ್ಕಾಪಟ್ಟಣದಲ್ಲಿ ಸಂಚರಿಸಲಿದೆ’ ಎಂದು ಹೇಳಿದರು.

ADVERTISEMENT

‘ಜೂನ್ 7ರಂದು ಪಾವಗಡ ತಾಲ್ಲೂಕಿನ ಕಸಬಾ, ಮಂಗಳವಾಡ, ಜೂನ್ 8ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಸಬಾ, ಶೆಟ್ಟಿಕೆರೆ, ಹುಳಿಯಾರಿನಲ್ಲಿ ಸಂಚರಿಸಲಿದೆ’ ಎಂದು ತಿಳಿಸಿದರು.

‘ಜೂನ್ 9ರಂದು ತಿಪಟೂರು ತಾಲ್ಲೂಕಿನ ಕಸಬಾ, ಬಿಳಿಗೆರೆ, ಜೂನ್ 10ರಂದು ಗುಬ್ಬಿ ತಾಲ್ಲೂಕಿನ ಕಸಬಾ, ನಿಟ್ಟೂರು, ಚೇಳೂರು, ಜೂನ್ 11ರಂದು ತುರುವೇಕೆರೆ ತಾಲ್ಲೂಕಿನ ಕಸಬಾ, ಮಾಯಸಂದ್ರ, ಜೂನ್ 12ರಂದು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಕೇಂದ್ರಗಳಲ್ಲಿ ಬೀದಿ ಮತ್ತು ಟ್ಯಾಬ್ಲೊ ಪ್ರದರ್ಶನ ನಡೆಯಲಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು’ ಅವರು ಮನವಿ ಮಾಡಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿ ಗಣೇಶ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಫ್ಯೂಚರ್ ಜನರಲಿ ಜನರಲ್ ಇನ್ಯೂರನ್ಸ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ರೈತ ಬಾಂಧವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.