ADVERTISEMENT

ಲಾಕ್‌ಡೌನ್‌: ಮನೆಗಳಲ್ಲಿಯೇ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 3:20 IST
Last Updated 15 ಮೇ 2021, 3:20 IST
ಜನರ ಸಂಚಾರವಿಲ್ಲದೆ ಸ್ತಬ್ಧವಾಗಿದ್ದ ತಿಪಟೂರು ರಸ್ತೆ
ಜನರ ಸಂಚಾರವಿಲ್ಲದೆ ಸ್ತಬ್ಧವಾಗಿದ್ದ ತಿಪಟೂರು ರಸ್ತೆ   

ತಿಪಟೂರು: ಬಸವ ಜಯಂತಿ, ಅಕ್ಷಯ ತೃತೀಯ, ಈದ್ ಉಲ್‌ ಫಿತ್ರ್‌ ಇದ್ದರೂ ಶುಕ್ರವಾರ ನಗರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು.

ತಾಲ್ಲೂಕಿನಾದ್ಯಂತ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಲಾಕ್‌ಡೌನ್‌ ಇರುವುದರಿಂದ ಕೆಲ ದೇವಾಲಯಗಳಲ್ಲಿ ಆರ್ಚಕರು ಮಾತ್ರವೇ ಶ್ರದ್ಧೆ, ಭಕ್ತಿಯಿಂದ ಆಚರಿಸಿದರು. ಮನೆಗಳಲ್ಲಿ ಬಸವ ಜಯಂತಿ ಆಚರಣೆ ಮಾಡಿದ್ದು,
ನಗರ ಪ್ರದೇಶದಲ್ಲಿ ಮಾತ್ರಕೆಲವರು ಅಕ್ಷಯ ತೃತೀಯ ಆಚರಿಸಿದರು.

ಅಕ್ಷಯ ತೃತೀಯದಂದು ಅನೇಕರು ಬಂಗಾರ ಖರೀದಿಸುತ್ತಿದ್ದರು. ಆದರೆ ಈ ವರ್ಷ ಮನೆಯಲ್ಲಿಯೇ ಲಕ್ಷ್ಮಿ ಪೂಜೆ ನೆರವೇರಿಸಿ, ಬಂಗಾರಕ್ಕೆ ಪೂಜೆ ಸಲ್ಲಿಸಿದರು.

ADVERTISEMENT

ಮನೆಯಲ್ಲಿಯೇ ಈದ್‌ ಉಲ್‌ ಫಿತ್ರ್‌ ಆಚರಿಸಲಾಯಿತು. ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ಮೊಬೈಲ್ ಮೂಲಕವೇ ಶುಭಾಶಯಗಳ ವಿನಿಮಯ ಮಾಡಿಕೊಂಡರು. ಬೆಳಿಗ್ಗೆ ಹಬ್ಬದ ಖರೀದಿಗೆಂದು ಹೊರಬಂದಿದ್ದ ಜನರು ಅಗತ್ಯ ವಸ್ತು ಖರೀದಿಸಿ ಮನೆ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.