ADVERTISEMENT

ತುಮಕೂರು | ಫೈಗಂಬರ್ ಅವಹೇಳನ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 4:36 IST
Last Updated 9 ಅಕ್ಟೋಬರ್ 2024, 4:36 IST
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರಿಗೆ ಮಂಗಳವಾರ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರಿಗೆ ಮಂಗಳವಾರ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು   

ತುಮಕೂರು: ಪ್ರವಾದಿ ಮಹಮದ್ ಫೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ನರಸಿಂಹಾನಂದ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರನ್ನು ಮಂಗಳವಾರ ನಗರದ ವಿವಿಧ ಮಸೀದಿಗಳ ಮುಖಂಡರು, ಮುಸ್ಲಿಂ ಸಮುದಾಯದ ಪ್ರಮುಖರು ಭೇಟಿಮಾಡಿ ಮನವಿ ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಿದರು. ಶಾಂತಿ ಸಂದೇಶ ಸಾರಿದ ಪ್ರವಾದಿ ಬಗ್ಗೆ ನರಸಿಂಹಾನಂದ ಮಹರಾಜ್ ನೀಡಿರುವ ಹೇಳಿಕೆಯನ್ನು ಖಂಡಿಸಿದರು.

ಒಬ್ಬ ಯತಿಯಾಗಿ ಇನ್ನೊಂದು ಧರ್ಮವನ್ನು ನೋಯಿಸುವ ರೀತಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಹೇಳಿಕೆ ನೀಡಿದ್ದಾರೆ. ಭಾರತ ಬಹುತ್ವ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮ, ಸಮುದಾಯಗಳಿಗೂ ಸಮಾನ ಅವಕಾಶವಿದೆ. ಯಾವ ಧರ್ಮದ ವ್ಯಕ್ತಿಯೂ ಇನ್ನೊಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಹಿಂದೂ– ಮುಸ್ಲಿಮರು ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸದಿಂದ ನಡೆದುಕೊಳ್ಳಬೇಕಿದೆ. ಶಾಂತಿಯ ವಾತಾವರಣ ನಿರ್ಮಾಣವಾಗಬೇಕಾಗಿದೆ. ಹಾಗಾಗಿ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಮುದಾಯದ ಮುಖಂಡರಾದ ಇಕ್ಬಾಲ್ ಅಹಮದ್, ನಯಾಜ್, ಉಬೇದುಲ್ಲಾ ಷರೀಫ್, ತಾಜುದ್ದೀನ್ ಷರೀಫ್, ಜಿಯಾವುಲ್ಲಾ, ಬುರ್ಹಾನ್, ಉಮರ್ ಫಾರೂಕ್, ಮೌಲಾನ ಅನೀಫ್‍ವುಲ್ಲಾ, ತಮೀಜುದ್ದೀನ್, ಅಕ್ರಮವುಲ್ಲಾ ಖಾನ್, ಅಫೀಜ್, ಮೆಹಬೂಬ್ ಪಾಷ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.