ADVERTISEMENT

ಪಡಿತರ ಅಕ್ಕಿ ತೂಕದಲ್ಲಿ ಮೋಸ

ಚಿಕ್ಕನಾಯಕನಹಳ್ಳಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 8:02 IST
Last Updated 27 ಜೂನ್ 2020, 8:02 IST
ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು
ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು   

ಚಿಕ್ಕನಾಯಕನಹಳ್ಳಿ: ಬಡವರಿಗೆ ವಿತರಿಸುವ ಪಡಿತರದ ತೂಕದಲ್ಲಿ ಮೋಸ ಮಾಡುತ್ತಿದ್ದು, 7ರಿಂದ 8 ಕ್ವಿಂಟಲ್ ಅಕ್ಕಿ ಕಡಿಮೆ ಇರುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಸಿಂಗದಹಳ್ಳಿ ರಾಜ್‌ಕುಮಾರ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಗೋಧಿ ತೂಕದಲ್ಲೂ ಮೋಸ ನಡೆಯುತ್ತಿರುವ ಬಗ್ಗೆ ದೂರುಗಳಿವೆ ಎಂದರು. ಇದಕ್ಕೆ ಬಹುತೇಕ ಸದಸ್ಯರು ಧ್ವನಿ ಗೂಡಿಸಿದರು.

ADVERTISEMENT

ಸದಸ್ಯೆ ಗಂಗಮ್ಮ ಚಂದ್ರಶೇಖರ್, ‘ಭೈರಾಪುರ ತಾಂಡದಲ್ಲಿ 15 ಜನರಿಗೆ ಪಡಿತರ ಚೀಟಿ ಇಲ್ಲ ಎಂದರು.

ಆಹಾರ ನಿರೀಕ್ಷಕ ಕಿರಣ್ ಕುಮಾರ್ ‘ಆಹಾರ ಧಾನ್ಯ ವಿತರಣೆಯ ಕುರಿತ ದೂರುಗಳ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು. ಸದಸ್ಯ ಆಲದಕಟ್ಟೆ ತಿಮ್ಮಯ್ಯ, ‘ಕೋವಿಡ್-19 ತಾಲ್ಲೂಕಿನಲ್ಲಿ ಹರಡುತ್ತಿದ್ದರೂ ಬ್ಯಾಂಕ್‌ಗಳಲ್ಲಿ ಮುಂಜಾಗೃತ ಕ್ರಮ ವಹಿಸುತ್ತಿಲ್ಲ. ಬ್ಯಾಂಕ್‌ಗಳಿಗೆ ಹೆಚ್ಚಿನ ಜನರು ಬರುತ್ತಾರೆ. ಇಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಉಪಯೋಗವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುತ್ತಿಲ್ಲ. ಹೆರಿಗೆಗಾಗಿ ಬಂದವರನ್ನು ಬೇರೆ ಕಡೆ ಕಳುಹಿಸುತ್ತಿದ್ದಾರೆ ಎಂದು ದೂರಿದರು.

ತಾಲ್ಲೂಕಿನ ವಿವಿಧೆಡೆ ಹೆಚ್ಚುತ್ತಿರುವ ಕಳ್ಳತನಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಳ್ಳತನ ಹೆಚ್ಚಿರುವ ಕಡೆ ಪೊಲೀಸ್‌ ಗಸ್ತು ಹೆಚ್ಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೇತನಗಂಗಾಧರ್, ಉಪಾಧ್ಯಕ್ಷ ಯಳನಡು ಯತೀಶ್, ತಹಶೀಲ್ದಾರ್ ತೇಜಸ್ವಿನಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅತಿಕ್ ಪಾಷ, ತಾ.ಪಂ. ಸದಸ್ಯರಾದ,ಶೈಲಾ ಶಶಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.