ADVERTISEMENT

ತುಮಕೂರು | ಆನ್‌ಲೈನ್‌ ಟ್ರೇಡಿಂಗ್‌: ಗೃಹಿಣಿಗೆ ₹12 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 5:38 IST
Last Updated 2 ಡಿಸೆಂಬರ್ 2024, 5:38 IST
<div class="paragraphs"><p>ಸೈಬರ್‌ ಕ್ರೈಮ್‌</p></div>

ಸೈಬರ್‌ ಕ್ರೈಮ್‌

   

ತುಮಕೂರು: ಟ್ರೇಡಿಂಗ್‌ ಮೇಲೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಕೊರಟಗೆರೆ ಪಟ್ಟಣದ ಬಿ.ಎಸ್‌.ಶೃತಿ ಎಂಬುವರು ₹16.36 ಲಕ್ಷ ಕಳೆದುಕೊಂಡಿದ್ದಾರೆ.

ಅಪರಿಚಿತರು ‘ಬಜಾಜ್‌ ಬುಲ್‌ ಸ್ಟಾಕ್ಸ್‌ ಇಂಟರಾಕ್ಟಿವ್‌ ಗ್ರೂಪ್’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಶೃತಿ ಅವರ ನಂಬರ್‌ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಟ್ರೇಡಿಂಗ್‌ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಗ್ರೂಪ್‌ನಲ್ಲಿದ್ದವರು ಹಣ ಹೂಡಿಕೆ ಮಾಡಿದ್ದರಿಂದ ಹೆಚ್ಚಿನ ಲಾಭ ಬಂದಿರುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಶೃತಿ ಸೈಬರ್‌ ವಂಚಕರು ತಿಳಿಸಿದ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.

ADVERTISEMENT

ಪ್ರಾರಂಭದಲ್ಲಿ ₹10 ಸಾವಿರ ಹೂಡಿಕೆ ಮಾಡಿದ್ದರು. ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ಹೇಳಿದ್ದಾರೆ. ಅ.24ರಿಂದ ನ.20ರ ವರೆಗೆ ಹಂತ ಹಂತವಾಗಿ ₹16.36 ಲಕ್ಷ ವರ್ಗಾವಣೆ ಮಾಡಿದ್ದಾರೆ. ಇದುವರೆಗೆ ಯಾವುದೇ ಹಣ ವಾಪಸ್‌ ನೀಡಿಲ್ಲ. ಇದರಿಂದ ಅನುಮಾನಗೊಂಡು ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.