ADVERTISEMENT

ಹುಳಿಯಾರು: 35ನೇ ದಿನಕ್ಕೆ ಕಾಲಿಟ್ಟ ರೈತ ಸಂಘದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:33 IST
Last Updated 12 ನವೆಂಬರ್ 2025, 6:33 IST
ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ನಡೆಯುತ್ತಿರುವ ರೈತಸಂಘದ ಧರಣಿಯಲ್ಲಿ ಡಾ. ನಾಗರಾಜು ಮಾತನಾಡಿದರು
ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ನಡೆಯುತ್ತಿರುವ ರೈತಸಂಘದ ಧರಣಿಯಲ್ಲಿ ಡಾ. ನಾಗರಾಜು ಮಾತನಾಡಿದರು   

ಹುಳಿಯಾರು: ​ಪಟ್ಟಣ ಪಂಚಾಯಿತಿ ಮುಂದೆ ಸಂತೆ ಸ್ಥಳಾಂತರ ಹಾಗೂ ಕಸ ವಿಲೇವಾರಿ ಘಟಕಕ್ಕೆ ಸೂಕ್ತ ಜಾಗ ಗುರುತಿಸುವಂತೆ ಆಗ್ರಹಿಸಿ ರೈತ ಸಂಘ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಮಂಗಳವಾರ 35ನೇ ದಿನಕ್ಕೆ ಕಾಲಿಟ್ಟಿದೆ.

ಪ್ರತಿಭಟನೆಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಪಟ್ಟಣದ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿ ನೈತಿಕ ಬೆಂಬಲ ಸೂಚಿಸಿದರು.

ಸ್ಪಂದನ ನರ್ಸಿಂಗ್ ಹೋಂ ವ್ಯವಸ್ಥಾಪಕ ಡಾ. ಕೆ.ಎಚ್.ನಾಗರಾಜು ಮಾತನಾಡಿ, ರೈತಸಂಘದ ಸದಸ್ಯರು ಧರಣಿ ಮೂಲಕ ಒತ್ತಾಯಿಸುತ್ತಿರುವುದು ನ್ಯಾಯ ಬದ್ಧವಾಗಿದೆ. ಹೋರಾಟಕ್ಕೆ ಸ್ಪಂದಿಸಿ ಭರವಸೆ ಈಡೇರಿಸಬೇಕಿತ್ತು. ಧರಣಿಯಲ್ಲಿ ಪಾಲ್ಗೊಂಡು ಅವರ ಆರೋಗ್ಯ ಕೂಡ ಹದಗೆಡುತ್ತಿದೆ. ಕೂಡಲೇ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ವೈದ್ಯ ಎಸ್.ಜಿ.ಸಿದ್ದರಾಮಯ್ಯ, ಕೆ.ಪಿ. ರಾಜಶೇಖರ್, ಜಯಶೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.