ADVERTISEMENT

ಲಂಚ: ಭೂ ವಿಜ್ಞಾನಿಗೆ 3 ವರ್ಷ ಸಜೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 7:05 IST
Last Updated 13 ಜುಲೈ 2024, 7:05 IST
<div class="paragraphs"><p>ಲಂಚ ಆರೋಪ: ಕಂದಾಯ ನಿರೀಕ್ಷಕ ಸೇರಿ ಇಬ್ಬರ ಬಂಧನ</p></div>

ಲಂಚ ಆರೋಪ: ಕಂದಾಯ ನಿರೀಕ್ಷಕ ಸೇರಿ ಇಬ್ಬರ ಬಂಧನ

   

ತುಮಕೂರು: ಕೊಳವೆಬಾವಿಗೆ ಪಾಯಿಂಟ್‌ ಗುರುತಿಸಲು ₹4,500 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಂತರ್ಜಲ ನಿರ್ದೇಶನಾಲಯದ ಪ್ರಭಾರಿ ಹಿರಿಯ ಭೂ ವಿಜ್ಞಾನಿ ಟಿ.ವೆಂಕಟೇಶ್‌ ಎಂಬುವರಿಗೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ 6 ತಿಂಗಳು ಜೈಲು ಶಿಕ್ಷೆ, ₹15 ಸಾವಿರ ದಂಡ ವಿಧಿಸಿದೆ.

ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ಗೌಡಿಹಳ್ಳಿ ಗೊಲ್ಲರಹಟ್ಟಿಯ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಬೋರ್‌ವೆಲ್‌ ಕರೆಸಲು ನೋಂದಣಿಗೆ ₹1,500, ಪಾಯಿಂಟ್‌ ಮಾಡಲು ₹3 ಸಾವಿರ ಲಂಚ ಕೇಳಿದ್ದರು. ಸಿದ್ದಪ್ಪ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಲಿಖಿತ ದೂರು ನೀಡಿದ್ದರು. ಎಸಿಬಿ ಪೊಲೀಸ್‌ ಡಿವೈಎಸ್‌ಪಿ ವಿ.ರಘುಕುಮಾರ್‌ ಪ್ರಕರಣ ದಾಖಲಿಸಿಕೊಂಡಿದ್ದರು. ಇನ್‌ಸ್ಪೆಕ್ಟರ್ ಎಸ್‌.ಎನ್‌.ಹಾಲಪ್ಪ ತನಿಖೆ ನಡೆಸಿದ್ದರು. ಜೆ.ರಮೇಶ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಶುಕ್ರವಾರ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಆರ್‌.ಪಿ.ಪ್ರಕಾಶ್‌ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.