ADVERTISEMENT

ಕೊರಟಗೆರೆ: ಎಲೆರಾಂಪುರ ಮಠದಿಂದ ದಿನಸಿ ವಿತರಣೆ 

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 14:16 IST
Last Updated 27 ಏಪ್ರಿಲ್ 2024, 14:16 IST
<div class="paragraphs"><p>ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿಯಲ್ಲಿ ಬೆಂಕಿ ಅವಘಡದಿಂದ ಸೂರು ಕಳೆದುಕೊಂಡವರಿಗೆ ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ದಿನಸಿ ಸಾಮಗ್ರಿ ವಿತರಿಸಿದರು.</p></div>

ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿಯಲ್ಲಿ ಬೆಂಕಿ ಅವಘಡದಿಂದ ಸೂರು ಕಳೆದುಕೊಂಡವರಿಗೆ ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ದಿನಸಿ ಸಾಮಗ್ರಿ ವಿತರಿಸಿದರು.

   

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಪುಗಾನಹಳ್ಳಿಯಲ್ಲಿ ಶುಕ್ರವಾರ ಬೆಂಕಿ ತಗುಲಿ 9 ಗುಡಿಸಲು ಭಸ್ಮವಾಗಿ ಸೂರು ಕಳೆದುಕೊಂಡಿದ್ದ ಕುಟುಂಬಗಳಿಗೆ ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಶನಿವಾರ ದಿನ ಬಳಕೆ ವಸ್ತುಗಳನ್ನು ನೀಡಿದರು.

ನಂತರ ಮಾತನಾಡಿದ ಸ್ವಾಮೀಜಿ, ಆಕಸ್ಮಿಕ ಅವಘಡಗಳಿಗೆ ಯಾರೂ ಹೊರತಾಗಿಲ್ಲ. ಚಿಂಪುಗಾನಹಳ್ಳಿಯಲ್ಲಿ ಬೆಂಕಿ ಅವಘಡ ಎರಡನೇ ಬಾರಿಗೆ ಸಂಭವಿಸಿ 10ಕ್ಕೂ ಹೆಚ್ಚು ಕುಟುಂಬಗಳು ಸೂರು ಕಳೆದುಕೊಂಡು ಬೀದಿ ಪಾಲಾಗಿವೆ. ಅವರಿಗೆ ಕನಿಷ್ಠ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಠದಿಂದ ದಿನಸಿ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.