ADVERTISEMENT

ಗುಬ್ಬಿ: ರೈಲ್ವೆ ಕೆಳಸೇತುವೆಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:32 IST
Last Updated 26 ಫೆಬ್ರುವರಿ 2026, 5:32 IST
ಗುಬ್ಬಿ ತಾಲ್ಲೂಕಿನ ವಿವಿಧೆಡೆ ರೈಲ್ವೆ ಕೆಳಸೇತುವೆಗಳ ಲೋಕಾರ್ಪಣೆ ಮಾಡಿದ ಕೇಂದ್ರ ಸಚಿವ ವಿ. ಸೋಮಣ್ಣ
ಗುಬ್ಬಿ ತಾಲ್ಲೂಕಿನ ವಿವಿಧೆಡೆ ರೈಲ್ವೆ ಕೆಳಸೇತುವೆಗಳ ಲೋಕಾರ್ಪಣೆ ಮಾಡಿದ ಕೇಂದ್ರ ಸಚಿವ ವಿ. ಸೋಮಣ್ಣ   

ಗುಬ್ಬಿ: ತಾಲ್ಲೂಕಿನ ಕೆಂಚನಹಳ್ಳಿ, ದೊಣ್ಣೆರೆ, ಬಾಡೇನಹಳ್ಳಿ ರೈಲ್ವೆ ಕೆಳ ಸೇತುವೆಗಳನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ, ಇಂಧನ ಖಾತೆಗಳ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಬುಧವಾರ ಲೋಕಾರ್ಪಣೆ ಮಾಡಿದರು. 

ಈ ವೇಳೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಎಲ್ಲ ರೈಲ್ವೆ ಕಾಮಗಾರಿಗಳನ್ನು ತುರ್ತಾಗಿ ಮುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು. 

ತುಮಕೂರು–ರಾಯದುರ್ಗ ರೈಲ್ವೆ ಕಾಮಗಾರಿಯನ್ನು 2027ರ ವೇಳೆಗೆ ಪೂರ್ಣ ಗೊಳಿಸಲಾಗುವುದು. ತುಮಕೂರು ಲೋಕಸಭಾ ಕ್ಷೇತ್ರದ ಜನರ ಋಣ ತೀರಿಸಲು ಪಕ್ಷಾತೀತವಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ಅಧಿಕಾರಕ್ಕಿಂತ ಜನರ ಹಿತ ಮುಖ್ಯ ಎಂದರು.

ADVERTISEMENT

ಈ ವೇಳೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮಯ್ಯ, ನವ್ಯಬಾಬು, ಚಂದ್ರಶೇಖರ್ ಬಾಬು, ಬಿ.ಎಸ್. ನಾಗರಾಜು, ಸಾಗರನಳ್ಳಿ ವಿಜಯಕುಮಾರ್, ಅ.ನ ಲಿಂಗಪ್ಪ, ಪಂಚಾಕ್ಷರಿ, ಬ್ಯಾಟರಂಗೇಗೌಡ, ನಂಜೇಗೌಡ, ರಾಜಶೇಖರ್, ರುದ್ರೇಶ್, ಶಿವಕುಮಾರ್, ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.