ADVERTISEMENT

ಗುಬ್ಬಿ: ಮಳೆ ನೀರು ರಸ್ತೆಗೆ- ಅಸಮಧಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:22 IST
Last Updated 20 ಸೆಪ್ಟೆಂಬರ್ 2020, 2:22 IST
ಗುಬ್ಬಿ ರಸ್ತೆಯಲ್ಲಿ ಚರಂಡಿ ಅಗೆದು ಮಣ್ಣು ರಸ್ತೆಯಲ್ಲಿ ಹಾಕಲಾಗಿದೆ
ಗುಬ್ಬಿ ರಸ್ತೆಯಲ್ಲಿ ಚರಂಡಿ ಅಗೆದು ಮಣ್ಣು ರಸ್ತೆಯಲ್ಲಿ ಹಾಕಲಾಗಿದೆ   

ಗುಬ್ಬಿ: ಪಟ್ಟಣದ ಕೆಲ ರಸ್ತೆಗಳಲ್ಲಿ ಮಣ್ಣು ಹಾಗೂ ಕಸದ ರಾಶಿ ಬಿದ್ದಿದ್ದು, ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ.

ಪ್ರಮುಖ ರಸ್ತೆಗಳ ಚರಂಡಿಗಳು ಕಟ್ಟಿಕೊಂಡಿವೆ. ಸ್ವಲ್ಪ ಮಳೆ ಬಂದರೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಕೆಲವೆಡೆ ಚರಂಡಿ ಮಣ್ಣನ್ನು
ರಸ್ತೆಗೆ ಸುರಿಯಲಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆ ಯಾಗುತ್ತಿದೆ. ಪಟ್ಟಣದ ವಿವೇಕಾನಂದ ರಸ್ತೆ ತಿರುವು, ಕೋರ್ಟ್ ಮುಂಭಾಗ, ಎಂ.ಜಿ ರಸ್ತೆ, ತೋಟದ ಸಾಲಿನಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಸತತವಾಗಿ ಮಳೆಯಾಗುತ್ತಿರುವುದರಿಂದ ರಸ್ತೆ ಕೊರೆದು, ಚರಂಡಿ ಕಟ್ಟಿಕೊಳ್ಳುತ್ತವೆ. ಎಷ್ಟೇ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಮಳೆಗಾಲದಲ್ಲಿ ಚರಂಡಿ ಕಟ್ಟಿಕೊಳ್ಳುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ‍ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಬಿ. ತೀರ್ಥಪ್ರಸಾದ್.

ADVERTISEMENT

ಪಟ್ಟಣ ಪಂಚಾಯಿತಿ ನಿರ್ಲಕ್ಷದಿಂದ ಮಳೆಗಾಲದಲ್ಲಿ ಚರಂಡಿ ಕಟ್ಟಿಕೊಳ್ಳುವುದು ರಸ್ತೆಬದಿ ಕೊರಕಲು ಬೀಳುವುದು ಸಾಮಾನ್ಯವಾಗಿದೆ. ಅಧಿಕಾರಿಗಳು ತುರ್ತಾಗಿ ಈ ಅವ್ಯವಸ್ಥೆ ಸರಿಪಡಿಸಬೇಕು ಎಂದು ಪಟ್ಟಣದ ನಿವಾಸಿ ಸೀಬಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.