ADVERTISEMENT

ಪಾವಗಡ: ಜುಲೈ 18ರಿಂದ ಗುಜ್ಜಾರಿ ಆಂಜನೇಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 14:23 IST
Last Updated 14 ಜುಲೈ 2024, 14:23 IST
ಪಾವಗಡ ತಾಲ್ಲೂಕು ಅರಸೀಕೆರೆ ಗುಜ್ಜಾರಿ ಆಂಜನೇಯ ಸ್ವಾಮಿ
ಪಾವಗಡ ತಾಲ್ಲೂಕು ಅರಸೀಕೆರೆ ಗುಜ್ಜಾರಿ ಆಂಜನೇಯ ಸ್ವಾಮಿ   

ಪಾವಗಡ: ತಾಲ್ಲೂಕಿನ ಅರಸೀಕೆರೆಯಲ್ಲಿ ಜುಲೈ 18ರಿಂದ 22ರವರೆಗೆ ಕೋದಂಡರಾಮ ಸಮೇತ, ಗುಜ್ಜಾರ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇಗುಲ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಅಭಿಷೇಕ, ಅಂಕುರಾರ್ಪಣೆ, ಕಳಶಸ್ಥಾಪನೆ, ಉತ್ಸವ ನಡೆಯಲಿದೆ. ಶುಕ್ರವಾರ ಧ್ವಜಾರೋಹಣ, ಅರಮನೆ ಉತ್ಸವ, ಹಿಟ್ಟಿನ ಆರತಿ, ಭೂತಬಲಿ ಸೇವೆ, 101 ಎಡೆಗಳು, ಬಿಲ್ಲುಗೂಡು ಸೇವೆ ನಡೆಯಲಿದೆ.

ಶನಿವಾರದಂದು ಸಣ್ಣ ರಥೋತ್ಸವ, ಶ್ರೀರಾಮ ಕಲ್ಯಾಣೋತ್ಸವ, ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 6ರ ವರೆಗೆ ರಥೋತ್ಸವ ನಡೆಯಲಿದೆ. ಸೋಮವಾರ ಕೇಶ ಮುಂಡನ, ಕಂಕಣ ವಿಸರ್ಜನೆ, ವಸಂತೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.