ADVERTISEMENT

ತುಮಕೂರಿನತ್ತ ಹೇಮಾವತಿ ನೀರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 14:54 IST
Last Updated 7 ಆಗಸ್ಟ್ 2020, 14:54 IST

ತುಮಕೂರು: ಹೇಮಾವತಿ ಜಲಾಶಯದಿಂದ ಶುಕ್ರವಾರ ಸಂಜೆ ತುಮಕೂರು ನಾಲೆಗೆ ನೀರು ಹರಿಬಿಡಲಾಗಿದೆ. ಮೂರು ದಿನಗಳಲ್ಲಿ ಹೇಮಾವತಿ ನೀರು ಜಿಲ್ಲೆ ಪ್ರವೇಶಿಸಲಿದೆ.

ಆ.10ರಂದು ಬೆಂಗಳೂರಿನಲ್ಲಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ. ಅಲ್ಲಿ ಯಾವ ಕೆರೆಗಳಿಗೆ ಎಷ್ಟು ದಿನ ನೀರು ಹರಿಸಬೇಕು ಎನ್ನುವ ವೇಳಾಪಟ್ಟಿ ರೂಪಿಸಲಾಗುತ್ತದೆ ಎಂದು ಹೇಮಾವತಿ ನಾಲಾ ಕಚೇರಿಯ ಮೂಲಗಳು ತಿಳಿಸಿವೆ.

ಡಿಸೆಂಬರ್‌ವರೆಗೂ ಜಿಲ್ಲೆಗೆ ನೀರು ಹರಿಯಲಿದೆ. ಸಾಮಾನ್ಯವಾಗಿ ಹೇಮಾವತಿ ನೀರನ್ನು ಬುಗುಡನಹಳ್ಳಿ ಕೆರೆಗೆ ಮೊದಲು ತುಂಬಿಸಲಾಗುತ್ತಿತ್ತು. ಆದರೆ ಇನ್ನೂ ಕೆರೆಯಲ್ಲಿ ಅರ್ಧ ಭಾಗ ನೀರಿದೆ. ಈ ಕಾರಣದಿಂದ ಉಳಿದ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎನ್ನುತ್ತವೆ ಮೂಲಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.