ADVERTISEMENT

ರಾಷ್ಟ್ರಕವಿ ಕುವೆಂಪುಗೆ ಅಪಮಾನ: ಎಚ್‌.ಡಿ. ದೇವೇಗೌಡ ಬೇಸರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 3:02 IST
Last Updated 4 ಜೂನ್ 2022, 3:02 IST
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ   

ತುಮಕೂರು: ‘ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂಬ ವಿಚಾರ ಕೇಳಿ ಮನಸ್ಸಿಗೆ ನೋವಾಗಿದೆ. ಒಂದು ಸಮುದಾಯ ಎಷ್ಟರಮಟ್ಟಿಗೆ ನಡೆದುಕೊಳ್ಳುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಬಳಗೆರೆಯಲ್ಲಿ ಮಾತ ನಾಡಿದ ಅವರು, ‘ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು ಅವರಷ್ಟು ಎತ್ತರಕ್ಕೆ ಬೆಳೆದ ಮತ್ತೊಬ್ಬ ವ್ಯಕ್ತಿ ಸಿಗುವು ದಿಲ್ಲ. ಅವರಿಗೆ ಅವಮಾನಿಸುತ್ತಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಬೀದಿಯಲ್ಲಿ ನಿಂತು ಹೋರಾಡುವ ಶಕ್ತಿ ಇಲ್ಲ’ ಎಂದರು.

‘ಕುವೆಂಪು ರಾಷ್ಟ್ರಮಟ್ಟದ ವ್ಯಕ್ತಿ. ಹಿಂದೆ ಏನು ನಡೆದಿತ್ತು ಎಂದು ಹೇಳಲು ಹೋಗುವುದಿಲ್ಲ. ಕುವೆಂಪು ಮನಸ್ಸಿನಲ್ಲಿ ಏನಿತ್ತುಎಂಬ ಚರ್ಚೆ ಅನಗತ್ಯ. ಮೇರುವ್ಯಕ್ತಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.