ADVERTISEMENT

ಹೆಬ್ಬೂರು: ಚಿರತೆ ದಾಳಿಗೆ ವೃದ್ಧೆ ಬಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 14:53 IST
Last Updated 17 ಅಕ್ಟೋಬರ್ 2019, 14:53 IST
ಲಕ್ಷ್ಮಮ್ಮ
ಲಕ್ಷ್ಮಮ್ಮ   

ಹೆಬ್ಬೂರು (ತುಮಕೂರು ತಾ.): ಬನ್ನಿಕುಪ್ಪೆ ಗ್ರಾಮದ ಬಳಿ ಬುಧವಾರ ಚಿರತೆ ದಾಳಿಗೆ ಗ್ರಾಮದ ಲಕ್ಷ್ಮಮ್ಮ (61) ಬಲಿಯಾಗಿದ್ದಾರೆ.

ಬುಧವಾರ ಮಧ್ಯಾಹ್ನ ಜಾನುವಾರು ಮೇಯಿಸಲು ಹೋಗಿದ್ದ ಇವರು ಕಣ್ಮರೆಯಾಗಿದ್ದರು. ಕುಟುಂಬದವರು ರಾತ್ರಿಯವರೆಗೂ ಹುಡುಕಿದರೂ ಪತ್ತೆಯಾಗಿರಲಿಲ್ಲ.

ಗುರುವಾರ ಬೆಳಿಗ್ಗೆ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಗ್ರಾಮದ ಹೊರ ವಲಯದ ಪೊದೆಯಲ್ಲಿ ಅವರ ದೇಹ ಪತ್ತೆಯಾಗಿದೆ. ತಲೆಯಿಂದ ಎದೆಯ ಭಾಗದವರೆಗೂ ಚಿರತೆ ತಿಂದಿದೆ. ಬಟ್ಟೆ ಗುರುತಿನ ಮೇಲೆ ಅವರು ದೇಹ ಪತ್ತೆ ಹಚ್ಚಲಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ADVERTISEMENT

ಗ್ರಾಮಸ್ಥರ ಆಕ್ರೋಶ: ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ, ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಸಹಾಯಕ ಅರಣ್ಯಾಧಿಕಾರಿ ಸುರೇಂದ್ರ ಭೇಟಿ ನೀಡಿದ್ದರು. ಸರ್ಕಾರದಿಂದ ಲಕ್ಷ್ಮಮ್ಮ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ದೊರಕಿಸಲಾಗುವುದು. ಚಿರತೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.