ADVERTISEMENT

22 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆ: ₹150 ಕೋಟಿ ಅನುದಾನದ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:56 IST
Last Updated 4 ಜುಲೈ 2025, 13:56 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಿ.ಪಾಳ್ಯದ ಸಿದ್ದರಾಮೇಶ್ವರ ವಾಕ್‌ ಮತ್ತು ಶ್ರವಣದೋಷ ಮಕ್ಕಳ ವಸತಿ ಶಾಲೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದರು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಿ.ಪಾಳ್ಯದ ಸಿದ್ದರಾಮೇಶ್ವರ ವಾಕ್‌ ಮತ್ತು ಶ್ರವಣದೋಷ ಮಕ್ಕಳ ವಸತಿ ಶಾಲೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದರು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ 22 ಕೆರೆಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆಯ ಚಾನಲ್‌ ರಕ್ಷಣೆಗಾಗಿ ‘ಕಟ್ ಆಂಡ್ ಕವರ್’ ಮಾಡಲು ಅಗತ್ಯವಿರುವ ₹150 ಕೋಟಿ ಅನುದಾನ ನೀಡುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದರು.

ತಾಲ್ಲೂಕಿನ ಜೆ.ಸಿ. ಪುರ ವ್ಯಾಪ್ತಿಯ ಬಿ.ಪಾಳ್ಯದ ಸಿದ್ದರಾಮೇಶ್ವರ ವಾಕ್‌ ಮತ್ತು ಶ್ರವಣದೋಷ ಮಕ್ಕಳ ವಸತಿ ಶಾಲೆಗೆ ಗುರುವಾರ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿದಾಗ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು.

ಶಾಸಕರ ಮನವಿ ಆಲಿಸಿದ ಸಚಿವ ಸೋಮಣ್ಣ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಅಂಗವಿಕಲರ ವಸತಿ ಶಾಲೆ ಅಭಿವೃದ್ಧಿಗೆ ₹50 ಲಕ್ಷ ಅನುದಾನ ನೀಡುತ್ತೇನೆ ಎಂದು ತಿಳಿಸಿದರು.

ADVERTISEMENT

ತೆಂಗು ಹಾಗೂ ಅಡಿಕೆಗೆ ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆಯಡಿ ಹವಮಾನ ಆಧಾರಿತ ವಿಮೆ ಸೌಲಭ್ಯಕ್ಕೆ ರೈತರು ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಸಪ್ತಶ್ರೀ, ಮಾಜಿ ಸಂಸದ ಜಿ.ಎಸ್. ಬಸವರಾಜು, ಪಿಎಲ್‌ಡಿ ಬ್ಯಾಂಕ್ ಅದ್ಯಕ್ಷ ಎಚ್.ಆರ್.ಶಶಿಧರ್, ಸಿದ್ದರಾಮೇಶ್ವರ ವಾಕ್‌ ಮತ್ತು ಶ್ರವಣದೋಷ ಮಕ್ಕಳ ವಸತಿ ಶಾಲೆಯ ಕಾರ್ಯದರ್ಶಿ ಸಿದ್ದೇಶ್ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.