ADVERTISEMENT

ಈಚನೂರು ಕೆರೆಗೆ ಹರಿದ ಹೇಮೆ: ತಿಪಟೂರು ಜನರಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 2:48 IST
Last Updated 15 ಮಾರ್ಚ್ 2024, 2:48 IST
ಪೋಟೋ : ತಿಪಟೂರು ತಾಲ್ಲೂಕಿನ ದಾಸೀಹಳ್ಳಿ – ರಂಗಾಪುರ-ನಾರಸೀಕಟ್ಟೆಯ ಮಧ್ಯೆದಲ್ಲಿ ಹರಿಯುತ್ತಿರುವ ಹೇಮಾವತಿ ನಾಲೆಯ ಚಿತ್ರಣ.
ಪೋಟೋ : ತಿಪಟೂರು ತಾಲ್ಲೂಕಿನ ದಾಸೀಹಳ್ಳಿ – ರಂಗಾಪುರ-ನಾರಸೀಕಟ್ಟೆಯ ಮಧ್ಯೆದಲ್ಲಿ ಹರಿಯುತ್ತಿರುವ ಹೇಮಾವತಿ ನಾಲೆಯ ಚಿತ್ರಣ.   

ತಿಪಟೂರು: ಹೇಮಾವತಿ ಜಲಾಶಯದ ಮೂಲಕ ತುಮಕೂರು ಬುಗಡನಹಳ್ಳಿಗೆ ತಲುಪುವ ನಾಲೆಯ ನೀರು ತಿಪಟೂರು ತಾಲ್ಲೂಕಿನ ಈಚನೂರು ಕೆರೆಗೆ ಬುಧವಾರ ರಾತ್ರಿ ಬಂದಿದೆ.

2023-24ನೇ ಸಾಲಿನಲ್ಲಿ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಮೀಸಲಿಟ್ಟಿರುವ ನೀರನ್ನು ಕುಡಿಯುವ ನೀರಿಗೆ ಅಭಾವವಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವ ಸಲುವಾಗಿ ಕೆರೆ-ಕಟ್ಟೆಗಳನ್ನು ತುಂಬಿಸಲು ಜಲಾಶಯದಿಂದ ನೀರು ಬಿಡಲಾಗಿದೆ. ಸದ್ಯ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು ತಾಲ್ಲೂಕಿನವ್ಯಾಪ್ತಿಯಲ್ಲಿ ನೀರು ಹರಿಯುತ್ತಿದ್ದು ನಾಲೆಯ ಎಡ ಹಾಗೂ ಬಲ ಭಾಗದ 100 ಮೀಟರ್ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ತಿಪಟೂರು ನಗರದ ಜನತೆ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳು ಹೇಮಾವತಿ ನೀರಿನ ಪ್ರಯೋಜನ ಪಡೆದುಕೊಳ್ಳುತ್ತಿವೆ. ತಿಪಟೂರು ನಗರಕ್ಕೆ ಬೇಕಾದ ಪೂರ್ಣ ನೀರಿನ ಬಳಕೆಗೆ ಈಚೂರಿನ ಕೆರೆಯನ್ನು ಅವಲಂಬಿಸಿದೆ. ಈಗ ಹೇಮಾವತಿಯ ನೀರು ಬಂದಿದ್ದು ತಾಲ್ಲೂಕಿನ ಜನತೆಗೆ ಖುಷಿ ತಂದಿದೆ. ಫೆಬ್ರುವರಿ ಅಂತ್ಯಕ್ಕೆ ಈ ಬಾರಿ ತಿಪಟೂರು ನಗರದಲ್ಲಿ ನೀರಿನ ಅಭಾವ ಉಂಟಾಗಿತ್ತು. 

ADVERTISEMENT

ಹೇಮಾವತಿ ನದಿಯೂ ತುಮಕೂರು ಜಿಲ್ಲೆಯ ಜೀವನಾಡಿಯಾಗಿದ್ದು 90ರ ನಂತರದ ದಶಕದಲ್ಲಿ ಹೇಮೆ ಜಿಲ್ಲೆಯ ಚಿತ್ರಣವನ್ನು ಬದಲಿಸಲು ಸಹಕಾರಿಯಾಗಿದೆ. ತುಮಕೂರು ಜಿಲ್ಲೆಯ ನಾಲೆಯಡಿಯಲ್ಲಿ 25.83 ಟಿಎಂಸಿ ನೀರನ್ನು ನೀಡಲಾಗುತ್ತಿದ್ದು ಸುಮಾರು 2,37,000 ಎಕರೆ ಅಚ್ಚುಕಟ್ಟೆ ಪ್ರದೇಶವಿದೆ. 266 ಕೆರೆಗಳಿಗೆ ನೀರನ್ನು ತುಂಬಿಸುವ 24 ಕುಡಿಯುವ ನೀರಿನ ಯೋಜನೆಯನ್ನು ಹಮ್ಮಿಕೊಂಡಿದ್ದು ಸದ್ಯ 12 ಯೋಜನೆಗಳು ಕಾರ್ಯರೂಪದಲ್ಲಿದ್ದು 100 ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿದೆ.

ಪೋಟೋ : ತಿಪಟೂರು ತಾಲ್ಲೂಕಿನ ದಾಸೀಹಳ್ಳಿ – ರಂಗಾಪುರ-ನಾರಸೀಕಟ್ಟೆಯ ಮಧ್ಯೆದಲ್ಲಿ ಹರಿಯುತ್ತಿರುವ ಹೇಮಾವತಿ ನಾಲೆಯ ಚಿತ್ರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.