ADVERTISEMENT

ಸಿದ್ಧಾಪುರ ಕೆರೆಗೆ ಹರಿದ ಹೇಮೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 17:09 IST
Last Updated 26 ಜುಲೈ 2024, 17:09 IST
ಮಧುಗಿರಿ ತಾಲ್ಲೂಕು ಸಿದ್ಧಾಪುರ ಕೆರೆಗೆ ಶುಕ್ರವಾರ ಹೇಮಾವತಿ ನೀರು ಹರಿಯಿತು
ಮಧುಗಿರಿ ತಾಲ್ಲೂಕು ಸಿದ್ಧಾಪುರ ಕೆರೆಗೆ ಶುಕ್ರವಾರ ಹೇಮಾವತಿ ನೀರು ಹರಿಯಿತು   

ಮಧುಗಿರಿ: ತಾಲ್ಲೂಕಿನ ಸಿದ್ಧಾಪುರ ಕೆರೆಗೆ ಶುಕ್ರವಾರ ಹೇಮಾವತಿ ನೀರು ಹರಿಯಿತು.

ಕೆರೆಯ ನೀರು ಸಂಪೂರ್ಣವಾಗಿ ಖಾಲಿಯಾಗಿದ್ದು, ಕೆಲವು ತಿಂಗಳ ಹಿಂದೆ ಕುಡಿಯುವ ನೀರಿಗೂ ಜನರು ಪರದಾಡುವಂತಾಗಿತ್ತು. ಎರಡು ತಿಂಗಳ ಹಿಂದೆ ಸಿದ್ಧಾಪುರ ಕೆರೆಗೆ 10 ದಿನ ನೀರು ಹರಿಸಲು ಸಚಿವರು ಕ್ರಮ ತೆಗೆದುಕೊಂಡಿದ್ದರು. ಆದರೆ ಬೆಳ್ಳಾವಿ ಸಮೀಪ ಪೈಪ್‌ಲೈನ್‌ ಒಡೆದಿದ್ದರಿಂದ ಕೆರೆಗೆ ಸರಿಯಾಗಿ ನೀರು ಹರಿದಿರಲಿಲ್ಲ. ಪುರಸಭೆಯಿಂದ ಪೈಪ್‌ಲೈನ್‌ಗಳನ್ನು ಸರಿಪಡಿಸಿ ನೀರು ಬಿಡುವಷ್ಟರಲ್ಲಿ ಬುಗುಡನಹಳ್ಳಿ ಕೆರೆಯಲ್ಲಿ ಹೇಮಾವತಿ ನೀರು ನಿಂತು ಹೋಗಿತ್ತು.

ಶುಕ್ರವಾರ ಸಂಜೆ ಸಿದ್ಧಾಪುರ ಕೆರೆಗೆ ಹೇಮಾವತಿ ನೀರು ಹರಿಯುತ್ತಿರುವುದರಿಂದ ಜನರು ಸಾಲಿನಲ್ಲಿ ನಿಂತು ವೀಕ್ಷಿಸಿದರು.

ADVERTISEMENT

ಒಂದು ತಿಂಗಳಿನಿಂದ ಮೋಡ ಕವಿದ ವಾತಾವರಣವಿದ್ದರೂ, ಉತ್ತಮ ಮಳೆಯಾಗದಿರುವುದರಿಂದ ಸಿದ್ಧಾಪುರ ಕೆರೆಯಲ್ಲಿ ನೀರು ಇಲ್ಲದೆ ಬರಿದಾಗಿದೆ. ಹೇಮಾವತಿ ಜಲಾಶಯ ಸಂಪೂರ್ಣವಾಗಿ ನೀರು ಭರ್ತಿಯಾಗಿ ಹರಿಯುತ್ತಿರುವುದರಿಂದ ಈ ಬಾರಿ ಸಿದ್ಧಾಪುರ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಿಕೊಳ್ಳಬೇಕು ಎಂದು ಜನರ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.