
ಪ್ರಜಾವಾಣಿ ವಾರ್ತೆ
ಹುಳಿಯಾರು: ಪಟ್ಟಣದ ಗ್ರಾಮದೇವತೆ ಹುಳಿಯಾರಮ್ಮ ಜಾತ್ರಾ ಮಹೋತ್ಸವ ಕಳೆದ 7 ದಿನಗಳಿಂದ ವಿಜೃಂಭಣೆಯಿಂದ ನಡೆದು ಶನಿವಾರ ಮಡಲಕ್ಕಿ ಸೇವೆಯೊಂದಿಗೆ ಸಂಪನ್ನಗೊಂಡಿತು.
ಧ್ವಜಾರೋಹಣ, ಅಂಕುರಾರ್ಪಣೆ ಹಾಗೂ ಮಧುವಣಗಿತ್ತಿ ಸೇವೆಯೊಂದಿಗೆ ಜಾತ್ರೆ ಆರಂಭಗೊಂಡು ಆರತಿ ಬಾನ ಹಾಗೂ ಎಡೆ ಸೇವೆ ನಡೆಯಿತು. ಹುಳಿಯಾರು ಗ್ರಾಮದೇವತೆ ದುರ್ಗಮ್ಮ, ಕೆಂಚಮ್ಮದೇವಿ, ಕೆಂಕೆರೆ ಗೊಲ್ಲರಹಟ್ಟಿ ಕರಿಯಮ್ಮ ದೇವಿ, ಗೌಡಗೆರೆ ದುರ್ಗಮ್ಮ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರ ಆಗಮನದಿಂದ ಜಾತ್ರೆಗೆ ಮೆರುಗು ತಂದಿತ್ತು.
ಕಳಸ ಮಹೋತ್ಸವ, ಗಣಪತಿ ಹಾಗೂ ಅಷ್ಟಲಕ್ಷ್ಮಿ ಹೋಮ ನಡೆದು 6ರಂದು ಕಂಕಣ ವಿಸರ್ಜನೆ, ಓಕಳಿ ಸೇವೆ ನಡೆದು ಜಾತ್ರೆ ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.