ADVERTISEMENT

ಮಾನವ ಹಕ್ಕುಗಳ ರಕ್ಷಣೆ ನಮ್ಮ ಕರ್ತವ್ಯ

ನಾಗರಿಕರಿಗೆ ಉಚಿತ ರಕ್ತದ ಗುಂಪು ಪತ್ತೆ ಹಚ್ಚುವ ಶಿಬಿರ’ದಲ್ಲಿ ಬೆಳ್ಳಿ ಲೋಕೇಶ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 19:48 IST
Last Updated 13 ಅಕ್ಟೋಬರ್ 2018, 19:48 IST
ಶಿಬಿರಕ್ಕೆ ಬೆಳ್ಳಿ ಲೋಕೇಶ್‌ ಚಾಲನೆ ನೀಡಿದರು
ಶಿಬಿರಕ್ಕೆ ಬೆಳ್ಳಿ ಲೋಕೇಶ್‌ ಚಾಲನೆ ನೀಡಿದರು   

ತುಮಕೂರು: ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಮಾನವ ಹಕ್ಕುಗಳು ಆತನನ್ನು ಹಿಂಬಾಲಿಸುತ್ತೇವೆ. ಅವುಗಳ ಉಲ್ಲಂಘನೆಯಾಗದಂತೆ ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಕರ್ತವ್ಯ ಎಂದು ಬೆಳ್ಳಿ ರಕ್ತನಿಧಿ ಅಧ್ಯಕ್ಷ ಬೆಳ್ಳಿ ಲೋಕೇಶ್‌ ತಿಳಿಸಿದರು.

ನಗರದ ಮರಳೂರು ದಿಣ್ಣೆ ಸರ್ಕಾರಿ ಶಾಲೆಯ ಆವರಣದಲ್ಲಿ ಆಲ್ ಇಂಡಿಯಾ ಹ್ಯೂಮನ್ ರೈಟ್ ಆ್ಯಂಡ್ ಸೋಷಿಯಲ್ ವೆಲ್‌ಫೇರ್ ಅ್ಯಂಡ್ ಅಫ್‌ಲಿಫ್ಟ್‌ಮೆಂಟ್ ಅರ್ಗನೈಜೇಷನ್ ಸಂಸ್ಥೆ ಹಾಗೂ ಬೆಳ್ಳಿ ಬ್ಲಡ್‌ ಬ್ಯಾಂಕ್‌ ವತಿಯಿಂದ ಆಯೋಜಿಸಿದ್ದ ’ನಾಗರಿಕರಿಗೆ ಉಚಿತ ಬ್ಲಡ್ ಗ್ರುಪ್ ಪತ್ತೆ ಹಚ್ಚುವ ಶಿಬಿರ’ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯೂ ಸರ್ಕಾರದ ಸವಲತ್ತುಗಳು ನಿಜವಾದ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಲವರು ಕೆಲಸ, ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಿದರು.

ADVERTISEMENT

ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಸಾದಿಕ್, ಜಿಲ್ಲಾ ಘಟಕದ ಅಧ್ಯಕ್ಷ ಅಜ್ಗರ್, ಜಿಲ್ಲಾ ಯುವ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿದರು.

29ನೇ ವಾರ್ಡಿನ ನಗರಪಾಲಿಕೆ ಸದಸ್ಯ ಇಸ್ಮಾಯಿಲ್, ಕಾರ್ಮಿಕ ಘಟಕದ ಅಧ್ಯಕ್ಷ ಎಂ.ರಾಜೇಂದ್ರ, ಸಲ್ಮಾನ್, ಎಚ್.ಎಂ.ಎಸ್.ಕುಮಾರ್, ಜುಬೇರ್ ಹಾಗೂ ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.