ADVERTISEMENT

ತುಮಕೂರು: ಅಂಗವಿಕಲರ ಮನೆ ಬಾಗಿಲಿಗೆ ಐಡಿ ಕಾರ್ಡ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:57 IST
Last Updated 18 ಜೂನ್ 2025, 13:57 IST
ಜಿ.ಪ್ರಭು
ಜಿ.ಪ್ರಭು   

ತುಮಕೂರು: ಮನೆಯಿಂದ ಹೊರ ಬರಲಾಗದ ಅಂಗವಿಕಲರಿಗೆ ಅವರ ಬಳಿಯೇ ತೆರಳಿ ಆಧಾರ್‌ ಕಾರ್ಡ್‌ ಮತ್ತು ಯುಡಿ ಐಡಿ ಕಾರ್ಡ್‍ಗಳನ್ನು ವಿತರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಅಂಗವಿಕಲರ ಪುನರ್ವಸತಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಗ್ರಾ.ಪಂ, ತಾ.ಪಂ ಕಚೇರಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಖಾಲಿ ಇರುವ ಎಂಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ ಹುದ್ದೆ ಭರ್ತಿ ಮಾಡಬೇಕು. ಆರೋಗ್ಯ ಇಲಾಖೆ ಜತೆಗೆ ಸಮನ್ವಯತೆ ಸಾಧಿಸಿ ತ್ವರಿತವಾಗಿ ಯುಡಿಐಡಿ ಕಾರ್ಡ್ ವಿತರಿಸಬೇಕು ಎಂದು ಸೂಚಿಸಿದರು.

ADVERTISEMENT

ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ವಸತಿಯುತ ತರಬೇತಿ, ಸಾಲ ಸೌಲಭ್ಯ ನೀಡಲಾಗುತ್ತಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಿವೇಶನ ರಹಿತರಿಗೆ ಗ್ರಾ.ಪಂ ಮಟ್ಟದಲ್ಲಿ ಜಾಗ ನೀಡುತ್ತಿದ್ದು, ನಿವೇಶನ ರಹಿತರು ಅರ್ಜಿ ಸಲ್ಲಿಸಬಹುದು. ಶೇ 5ರ ಮೀಸಲಾತಿಯಂತೆ ಅಂಗವಿಕಲರಿಗೆ ನಿಗದಿಪಡಿಸಿ ಯೋಜನೆಗಳಲ್ಲಿ ಸೌಲಭ್ಯ ಒದಗಿಸಲು ಎಲ್ಲ ಇಲಾಖೆಗಳಿಗೆ ಪತ್ರ ರವಾನಿಸುವಂತೆ ನಿರ್ದೇಶಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನ್‌ಕುಮಾರ್‌, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮನಮೋಹನ್‌, ಗಿರಿಜಾ, ಡಿಎಚ್‌ಒ ಡಾ.ಬಿ.ಎಂ.ಚಂದ್ರಶೇಖರ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್‌ ಬೇಗ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.