ಕುಣಿಗಲ್: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಕಣ್ಮರೆಯಾಗಿದ್ದು, ಅವ್ಯವಸ್ಥೆಯಿಂದ ಕೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸರಿಪಡಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳು ಕಳೆದರೂ ಸರಿಪಡಿಸಿಲ್ಲ. ನೀರಿನ ಫಿಲ್ಟರ್ ದುರಸ್ತಿಗಾಗಿ ₹50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಕ್ಯಾಂಟೀನ್‌ನಿಂದ ತ್ಯಾಜ್ಯದ ನೀರು ಹೋಗುವ ಪೈಪ್‌ಲೈನ್ ನಾಶವಾಗಿದ್ದು, ತ್ಯಾಜ್ಯ ನೀರು ಕ್ಯಾಂಟೀನ್‌ನಲ್ಲಿ ಉಳಿಯುತ್ತಿದೆ. ದುರ್ವಾಸನೆ ಬರುತ್ತಿರುವ ಕಾರಣ ಕೆಲಸಗಾರರು ಸೇರಿದಂತೆ ಊಟ ಮತ್ತು ತಿಂಡಿ ಸೇವನೆಗೆ ಬರುವವರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ.
ಸಂಬಂಧಪಟ್ಟವರು ಗಮನಹರಿಸಲು ಸರೋಜಮ್ಮ, ವಿದ್ಯಾರ್ಥಿಗಳಾದ ಮೋಹನ್, ನವೀನ್, ಕೃಷ್ಣ, ಮನೋಜ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.