ADVERTISEMENT

ಮೊಬೈಲ್ ಬಿಟ್ಟು ಅಭ್ಯಾಸ ನಡೆಸಿ: ಇಸ್ರೋ ವಿಜ್ಞಾನಿ ರಾಮನಗೌಡ, ವೆಂಕನಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:21 IST
Last Updated 31 ಡಿಸೆಂಬರ್ 2025, 4:21 IST
ತುಮಕೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಈಚೆಗೆ ಶಾಲಾ ವಾರ್ಷಿಕೋತ್ಸವ ನಡೆಯಿತು. ಇಸ್ರೋ ವಿಜ್ಞಾನಿ ರಾಮನಗೌಡ ವೆಂಕನಗೌಡ ನಾಡಗೌಡ, ಡಿಡಿಪಿಐ ರಘುಚಂದ್ರ, ಸಂಸ್ಥೆಯ ಪ್ರಮುಖರಾದ ಪಿ.ಪಿ.ಮಲ್, ಜಿ.ಆರ್.ಸುರೇಶ್, ಟಿ.ಆರ್.ಸಾಯಿಪ್ರಸಾದ್, ಆನಂದರಾಮು ಇತರರು ಉಪಸ್ಥಿತರಿದ್ದರು
ತುಮಕೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಈಚೆಗೆ ಶಾಲಾ ವಾರ್ಷಿಕೋತ್ಸವ ನಡೆಯಿತು. ಇಸ್ರೋ ವಿಜ್ಞಾನಿ ರಾಮನಗೌಡ ವೆಂಕನಗೌಡ ನಾಡಗೌಡ, ಡಿಡಿಪಿಐ ರಘುಚಂದ್ರ, ಸಂಸ್ಥೆಯ ಪ್ರಮುಖರಾದ ಪಿ.ಪಿ.ಮಲ್, ಜಿ.ಆರ್.ಸುರೇಶ್, ಟಿ.ಆರ್.ಸಾಯಿಪ್ರಸಾದ್, ಆನಂದರಾಮು ಇತರರು ಉಪಸ್ಥಿತರಿದ್ದರು   

ತುಮಕೂರು: ಮಕ್ಕಳು ಮೊಬೈಲ್ ಗೀಳಿಗೆ ಬೀಳದೆ, ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧನೆಯತ್ತ ಮುಖ ಮಾಡಬೇಕು ಎಂದು ಇಸ್ರೋ ವಿಜ್ಞಾನಿ ರಾಮನಗೌಡ ವೆಂಕನಗೌಡ ನಾಡಗೌಡ ಸಲಹೆ ನೀಡಿದರು.

ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ವಿದ್ಯಾನಿಕೇತನ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಯಾವುದೇ ಕಾರಣಕ್ಕೂ ಮೊಬೈಲ್‍ ಗೀಳಿಗೆ ಒಳಗಾಗಬಾರದು. ಮೊಬೈಲ್ ಬಿಟ್ಟು, ಪುಸ್ತಕ ಹಿಡಿದು ಜ್ಞಾನಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದರು.

ADVERTISEMENT

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಜ್ಞಾನ ಕ್ಷೇತ್ರ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ಮಕ್ಕಳು ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಘುಚಂದ್ರ, ‘ಮಕ್ಕಳು ಉತ್ತಮ ಶಿಕ್ಷಣ ಪಡೆದು ಪೋಷಕರ ಆಸೆ ಪೂರೈಸಬೇಕು. ಹೆತ್ತವರು, ಶಿಕ್ಷಣ ನೀಡಿದ ಗುರುಗಳು, ಕಲಿತ ಶಾಲೆಗೆ ಕೀರ್ತಿ ತರಬೇಕು’ ಎಂದು ತಿಳಿಸಿದರು.

ಸಂಸ್ಥೆ ಅಧ್ಯಕ್ಷ ಪಿ.ಪಿ.ಮಲ್, ಉಪಾಧ್ಯಕ್ಷ ಜಿ.ಆರ್.ಸುರೇಶ್, ಜಂಟಿ ಕಾರ್ಯದರ್ಶಿ ಟಿ.ಆರ್.ಸಾಯಿಪ್ರಸಾದ್, ಖಜಾಂಚಿ ಆನಂದರಾಮು ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.