ADVERTISEMENT

ತರಾತುರಿಯಲ್ಲಿ ತೀನಂಶ್ರೀ ಭವನ ಉದ್ಘಾಟನೆ; ಬಾ.ಹ.ರಮಾಕುಮಾರಿ ಬೇಸರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 15:43 IST
Last Updated 2 ಸೆಪ್ಟೆಂಬರ್ 2020, 15:43 IST
ಬಾ.ಹ.ರಮಾಕುಮಾರಿ
ಬಾ.ಹ.ರಮಾಕುಮಾರಿ   

ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ತರಾತುರಿಯಲ್ಲಿ ತೀನಂಶ್ರೀ ಭವನ ಉದ್ಘಾಟಿಸಿದ್ದು ಇದು ಸಾಹಿತ್ಯಾಸಕ್ತರಿಗೆ ನಿರಾಸೆ ತರಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ತೀನಂಶ್ರೀ ಕೇವಲ ನಮ್ಮ ಜಿಲ್ಲೆಗಷ್ಟೇ ಅಲ್ಲ ಕನ್ನಡ ನಾಡಿನಲ್ಲೇ ಪ್ರಸಿದ್ಧ ವಿದ್ವಾಂಸರಾಗಿದ್ದರು. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅಪಾರ. ಇಂತಹವರ ಹೆಸರಿನಲ್ಲಿ ಸಾಹಿತ್ಯ ಭವನ ನಿರ್ಮಾಣವಾಗತೊಡಗಿದ್ದು ಸಾಹಿತ್ಯ ವಲಯದಲ್ಲಿ ಹೆಮ್ಮೆಯ ಸಂಗತಿ ಆಗಿತ್ತು. ನನೆಗುದಿಗೆ ಬಿದ್ದಿದ್ದ ಭವನವನ್ನು ಬೇಗ ಉದ್ಘಾಟಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸಾಹಿತಿಗಳು ಆಗ್ರಹಿಸಿದ್ದರು.

ಆದರೆ ಹೀಗೆ ಸಾಹಿತ್ಯಾಸಕ್ತರಿಗೆ ನಿರಾಸೆ ಆಗುವ ರೀತಿ ತರಾತುರಿಯಲ್ಲಿ ಉದ್ಘಾಟನೆ ಆಗಿದ್ದು ಅಪೇಕ್ಷಣೀಯವಲ್ಲ. ತೀನಂಶ್ರೀ ಅವರಿಗೆ ಘನತೆ-ಗೌರವ ತರುವ ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಕನ್ನಡ ಸಂಘಟನೆಗಳು, ಸಾಹಿತಿಗಳು ಒಟ್ಟಾಗಿ ಸೇರಿ ತೀನಂಶ್ರೀ ಕುರಿತ ವಿಚಾರ ಸಂಕಿರಣ ಏರ್ಪಡಿಸುವ ಮೂಲಕ ಒಂದು ಸಾಹಿತ್ಯ–ಸಾಂಸ್ಕೃತಿಕ ಹಬ್ಬದಂತೆ ಮಾಡಬಹುದಿತ್ತು ಎಂದಿದ್ದಾರೆ.

ADVERTISEMENT

ಸಾಹಿತಿಗಳು, ಸಾಹಿತ್ಯಾಸಕ್ತರ ಅನುಪಸ್ಥಿತಿಯಲ್ಲಿ ಭವನ ಉದ್ಘಾಟನೆ ಆಗಿರುವುದು ಬೇಸರ ತರಿಸಿದೆ. ನವೆಂಬರ್‌ನಲ್ಲಿ ಸಾಹಿತ್ಯ– ಸಂಸ್ಕೃತಿ ಉತ್ಸವ ಏರ್ಪಡಿಸುವ ಮೂಲಕ ಈ ಕೊರತೆ ನೀಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.