ADVERTISEMENT

ಕರಿಯಮ್ಮ ದೇವಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 5:49 IST
Last Updated 12 ಏಪ್ರಿಲ್ 2022, 5:49 IST
ತುರುವೇಕೆರೆ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಎಪಿಎಂಸಿ ನಿರ್ದೇಶಕ ವಿ.ಟಿ. ವೆಂಕಟರಾಮಯ್ಯ, ದಸಂಸ ತಾಲ್ಲೂಕು ಸಂಚಾಲಕ ಡಾ.ಚಂದ್ರಯ್ಯ, ಸಂಚಾಲಕಾದ ಕುಮಾರ್, ರಾಮಕೃಷ್ಣಯ್ಯ, ಶಿವಣ್ಣ ಉಪಸ್ಥಿತರಿದ್ದರು

ಹುಳಿಯಾರು: ಹೋಬಳಿಯ ಗುರುವಾಪುರ ಗ್ರಾಮದ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವವು ಇದೇ 14ರಿಂದ 17ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

14ರಂದು ಮಡ್ಲಕ್ಕಿ ಸೇವೆ, 15ರಂದು ಕುಂಕುಮಾರ್ಚನೆ, ಅಭಿಷೇಕ, ಧ್ವಜಾರೋಹಣ, ಕಂಕಣಧಾರಣೆ, ಮಧುವಣಗಿತ್ತಿ ಸೇವೆ ನಡೆಯಲಿದೆ. ರಾತ್ರಿ ಯರೇಹಳ್ಳಿ ಕೆಂಪಮ್ಮದೇವಿ, ಚಿಕ್ಕಬ್ಯಾಲದಕೆರೆ ಕರಿಯಮ್ಮ ದೇವಿ ಆಗಮಿಸಲಿದ್ದು ಕೂಡು ಭೇಟಿ ನಡೆಯಲಿದೆ. 16ರಂದು ಅಗ್ನಿಕೊಂಡೋತ್ಸವ, ರಾತ್ರಿ ರಥೋತ್ಸವವಿದೆ. 17ರಂದು ಸಿಡಿ ಉತ್ಸವದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ ಎಂದು ದೇವಾಲಯದ ಸಮಿತಿ ತಿಳಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT