ADVERTISEMENT

ತುಮಕೂರು: ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ನಡುವೆ ಹೊಡೆದಾಟ, ಬೈಕ್‌ಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 29 ಮೇ 2023, 10:23 IST
Last Updated 29 ಮೇ 2023, 10:23 IST
ಬೈಕ್ ಸುಟ್ಟು ಕರಕಲಾಗಿರುವ ದೃಶ್ಯ
ಬೈಕ್ ಸುಟ್ಟು ಕರಕಲಾಗಿರುವ ದೃಶ್ಯ   

ಕೊಡಿಗೇನಹಳ್ಳಿ (ತುಮಕೂರು ಜಿಲ್ಲೆ): ಹೋಬಳಿಯ ಕಡಗತ್ತೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜೆಡಿಎಸ್ ಪಕ್ಷದ ಮುದ್ದಪ್ಪ ಮತ್ತು ಕಾಂಗ್ರೆಸ್ ಪಕ್ಷದ ಕೃಷ್ಣಪ್ಪ ಎಂಬುವರ ಮಧ್ಯೆ ನಡೆದ ಗಲಾಟೆ ಕೊನೆಗೆ ರಾಜಕೀಯ ತಿರುವು ಪಡೆದುಕೊಂಡಿದೆ. ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ.

ಮುದ್ದಪ್ಪ ಅವರಿಗೆ ಸೇರಿದ ಬೈಕ್‌ಗೆ ಕೆಲವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರೆ, ಇದಕ್ಕೆ ಪ್ರತಿಕಾರವಾಗಿ ಕೃಷ್ಣಪ್ಪ ಮೇಲೆ ಹಲ್ಲೆ ನಡೆದಿದ್ದು, ತಲೆಗೆ ಪೆಟ್ಟು ಬಿದ್ದಿದೆ. ಸ್ಥಳಕ್ಕೆ ಬಂದಿದ್ದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನೂ ಪ್ರಕರಣ ದಾಖಲಾಗಿಲ್ಲ.

ADVERTISEMENT

ಇದನ್ನೂ ಓದಿ.... ಅತ್ಯಾಚಾರಿಯ ವಿರುದ್ಧ ನ್ಯಾಯ ಕೇಳುವುದು ದೇಶದ್ರೋಹವೇ? ಬಿಜೆಪಿಗೆ ಕಾಂಗ್ರೆಸ್‌ ‍‍ಪ್ರಶ್ನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.