ADVERTISEMENT

ಕೆ.ಎನ್.ರಾಜಣ್ಣ ಪರ ರಾಜ್ಯದಾದ್ಯಂತ ಹೋರಾಟ: ಸಿಂಗದಹಳ್ಳಿ ರಾಜ್ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 6:12 IST
Last Updated 2 ಸೆಪ್ಟೆಂಬರ್ 2025, 6:12 IST
ಚಿಕ್ಕನಾಯಕನಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಚಿಕ್ಕನಾಯಕನಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಚಿಕ್ಕನಾಯಕನಹಳ್ಳಿ: ಕೆ.ಎನ್.ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವವರೆಗೂ ಅವರ ಅಭಿಮಾನಿಗಳು ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ, ದಲಿತ ಸಂಘಟನೆ ಹಾಗೂ ವಾಲ್ಮೀಕಿ ಸಮಾಜ ಪಕ್ಷಾತೀತವಾಗಿ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪಟ್ಟಣದ ಕನ್ನಡ ರಕ್ಷಣಾ ಸಂಘದಿಂದ ತಾಲ್ಲೂಕು ಕಚೇವರೆಗೆ ಸೆಪ್ಟೆಂಬರ್ 8ರಂದು ಮೆರವಣಿಗೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ರಾ

ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಸರಿಯಲ್ಲ. ಸರ್ಕಾರ ಕೆ.ಎನ್.ರಾಜಣ್ಣ ಅವರನ್ನು ಸಚಿವರನ್ನಾಗಿ ಮರು ಆಯ್ಕೆ ಮಾಡದಿದ್ದರೆ ಮುಂಬರುವ ಗ್ರಾ.ಪಂ, ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಸರ್ಕಾರ ಮತಗಳನ್ನು ಕಳೆದುಕೊಳ್ಳಲಿದೆ. ಬಡವರು, ರೈತರ ಪರವಾಗಿರುವ ಅವರನ್ನು ಸಿದ್ದರಾಮಯ್ಯ ಗಮನಿಸಬೇಕು. ಸರ್ಕಾರದ ಸಚಿವರನ್ನಾಗಿ ಮಾಡಬೇಕು. ಸಹಕಾರಿ ರಂಗದಲ್ಲಿರುವ ರಾಜಣ್ಣ ಅವರನ್ನು ಇಡೀ ರಾಜ್ಯವೇ ಬೆಂಬಲಿಸುತ್ತಿದೆ ಎಂದರು.

ADVERTISEMENT

ದಲಿತ ಮುಖಂಡ ಗೋ.ನಿ.ವಸಂತ್ ಕುಮಾರ್, ಕಸಬಾ ಸೊಸೈಟಿ ಅಧ್ಯಕ್ಷ ಪ್ರಸನ್ನ ಕುಮಾರ್, ಶಿವಣ್ಣ, ಶೆಟ್ಟಿಕೆರೆ ಸೊಸೈಟಿ ನಾಗಣ್ಣ, ಮೂರ್ತಣ್ಣ, ರಾಮಚಂದ್ರಯ್ಯ, ಶಶಿಧರ್, ಮಂಜುನಾಥ್, ರಮೇಶ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.