
ಪ್ರಜಾವಾಣಿ ವಾರ್ತೆ
ಬಂಧನ
ಕೊಡಿಗೇನಹಳ್ಳಿ: ಕಸದ ವಿಚಾರಕ್ಕೆ ಪ್ರಾರಂಭವಾದ ಗಲಾಟೆ ಮಾರಣಾಂತಿಕ ಹಲ್ಲೆ ಸ್ವರೂಪ ಪಡೆದು ಗಂಭೀರವಾಗಿ ಗಾಯಗೊಂಡು ಪೋಕ್‌ರಾಮ್ ಎಂಬುವವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಪಟ್ಟಣದ ಪದ್ಮಾವತಿ ಟೆಕ್ಸ್‌ಟೈಲ್ಸ್ ಮಾಲೀಕ ಭವರ್ ಲಾಲ್ ಎನ್ನುವವರು ಕಸದ ವಿಚಾರಕ್ಕೆ ಲಕ್ಷ್ಮಿ ಟೆಕ್ಸ್‌ಟೈಲ್ಸ್ ಮಾಲೀಕ ಪೋಕ್‌ರಾಮ್ ಎಂಬುವವರ ಜತೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿ ಭವರ್‌ಲಾಲ್ ದೊಡ್ಡ ಗಾತ್ರದ ಕಲ್ಲು ಎಸೆದು ಪೋಕ್‌ರಾಮ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ತಕ್ಷಣ ಸ್ಥಳದಲ್ಲಿದ್ದವರು ಮದ್ಯಪ್ರವೇಶಿಸಿ ತಡೆದಿದ್ದಾರೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.