ADVERTISEMENT

ಕೊರಟಗೆರೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 4:45 IST
Last Updated 3 ಜುಲೈ 2020, 4:45 IST
ಕೊರಟಗೆರೆ ತಾಲ್ಲೂಕು ಪಂಚಾಯಿತಿ ನೌಕರರಿಒಬ್ಬರಿಗೆ ಕೊರಿನಾ ಸೋಂಕು ಪತ್ತೆಯದ ಹಿನ್ನೆಯಲ್ಲಿ ವಸತಿಗೃಹ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಕೊರಟಗೆರೆ ತಾಲ್ಲೂಕು ಪಂಚಾಯಿತಿ ನೌಕರರಿಒಬ್ಬರಿಗೆ ಕೊರಿನಾ ಸೋಂಕು ಪತ್ತೆಯದ ಹಿನ್ನೆಯಲ್ಲಿ ವಸತಿಗೃಹ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.   

ಕೊರಟಗೆರೆ: ತಾಲ್ಲೂಕಿನಲ್ಲಿ ಒಂದೇ ದಿನ 19 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಬುಧವಾರ ತಡರಾತ್ರಿ ತಾಲ್ಲೂಕಿನ ಅಜ್ಜಿಹಳ್ಳಿ, ಮಿಣಸಂದ್ರ, ಎಂ.ವೆಂಕಟಾಪುರ, ವೆಂಕೋಬ ನಹಳ್ಳಿ, ಪಾತಗಾನಹಳ್ಳಿ, ಕೊರಟ ಗೆರೆ ಟೌನ್, ಟಿ.ಗೊಲ್ಲಹಳ್ಳಿ, ಕರೇಕಲ್ಲು ತಾಂಡ, ನಾಗೇನಹಳ್ಳಿ, ಗಟ್ಲಹಳ್ಳಿ, ಕುರುಬರ ಪಾಳ್ಯ, ಮಾರಗೊಂಡ ನಗುಣಿ, ಯತ್ತುಗಾನಹಳ್ಳಿ, ಜಂಪೇನಹಳ್ಳಿಯಲ್ಲಿ ತಲಾ ಒಂದು ಪ್ರಕರಣ, ಎಲೆರಾಂಪುರದಲ್ಲಿ ತಲಾ 2 ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ತಾಲ್ಲೂಕು ಪಂಚಾಯಿತಿಯ ಒಬ್ಬ ನೌಕರರು ಸೇರಿದ್ದಾರೆ.

ಗುರುವಾರ ತಾಲ್ಲೂಕಿನ ಕತ್ತಿನಾಗೇನಹಳ್ಳಿ, ಮುದ್ದನಹಳ್ಳಿ, ಚಿಕ್ಕನಹಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

ADVERTISEMENT

ಆದರೆ, ಸೋಂಕು ಕಂಡು ಬಂದವರಲ್ಲಿ ಬಹುತೇಕರಿಗೆ ನೆಗಡಿ, ಕೆಮ್ಮು, ಜ್ವರ ಈ ರೀತಿಯ ಯಾವುದೇ ಲಕ್ಷಣಗಳಿಲ್ಲ. ಗಂಟಲು ಸ್ರಾವ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ದೃಢಪಟ್ಟವರನ್ನು ತಾಲ್ಲೂಕಿನ ರೆಡ್ಡಿಕಟ್ಟೆಬಾರೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಇರಿಸಲಾಗಿದೆ. ಗರ್ಭಿಣಿಯೊಬ್ಬರನ್ನು ಮಾತ್ರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆಎನ್ನಲಾಗಿದೆ.

‘ತಾಲ್ಲೂಕು ಪಂಚಾಯಿತಿ ವಸತಿ ಪ್ರದೇಶ ಹಾಗೂ ಕಚೇರಿಯನ್ನು ಸೀಲ್‌ ಡೌನ್ ಮಾಡಲಾಗಿದೆ’ ಎಂದು ತಹಶೀಲ್ದಾರ್ ಬಿ.ಎಂ.ಗೋವಿಂದರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.