ಕೊರಟಗೆರೆ: ಇಲ್ಲಿನ ಚಾಣಕ್ಯ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ತುಮಕೂರಿನ ನಾಟಕ ಮನೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಎರಡು ನಾಟಕಗಳನ್ನೊಳಗೊಂಡ ಎರಡು ದಿನಗಳ ನಾಟಕೋತ್ಸವ ನಡೆಯಿತು.
ಮೊದಲನೆ ದಿನ ರಾಷ್ಟ್ರಕವಿ ಕುವೆಂಪು ವಿರಚಿತ ‘ಬೆರಳ್ಗೆ ಕೊರಳ್’ ನಾಟಕ ಪ್ರದರ್ಶನಗೊಂಡಿತು. ಈ ನಾಟಕ ಏಕಲವ್ಯ ಪಾತ್ರಧಾರಿ ಕಥಾವಸ್ತುವಾಗಿದ್ದು ಏಕಲವ್ಯನ ಏಕಾಗ್ರತೆ ಮತ್ತು ಸಮರ್ಪಣಾಭಾವ ತೋರಿಸಿಕೊಡುತ್ತದೆ. ವರ್ತಮಾನದ ಈ ಕಾಲಘಟ್ಟದಲ್ಲಿ ಮಹಾಭಾರತದ ಪಾತ್ರಗಳ ಮೇಲೆ ಕ್ಷಕಿರಣ ಚೆಲ್ಲಿ ಅಲ್ಲಿಯ ಘಟನೆ, ಪಾತ್ರಗಳು ಇಂದಿಗೂ ಮತ್ತು ಎಂದೆಂದಿಗೂ ಜೀವಂತ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿನಯಿಸಲಾಯಿತು. ಏಕಲವ್ಯನ ಪಾತ್ರದ ಚಿತ್ರಣ ಅತ್ಯಂತ ಮನೋವೈಜ್ಞಾನಿಕವಾಗಿ ಮೂಡಿ ಬಂತು. ಅದೇ ರೀತಿ ಮಹಾಭಾರತದ ಅರ್ಜುನ, ಅಶ್ವತ್ಥಾಮ, ದ್ರೋಣ ಪಾತ್ರಗಳ ಅಭಿನಯ ಮನೋಜ್ಞವಾಗಿತ್ತು.
ಎರಡನೆ ದಿನ ರಾಷ್ಟ್ರಕವಿ ಕುವೆಂಪು ವಿರಚಿತ ಕಾನೀನ ನಾಟಕ ನೋಡುಗರ ಮನಸೂರೆಗೊಂಡಿತು. ರಾಘವೇಂದ್ರ ನಾಟಕ ನಿರ್ದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.