ಕುಣಿಗಲ್: ತಾಲ್ಲೂಕಿನ ಎರಡು ಸರ್ಕಾರಿ ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಒಟ್ಟಾರೆ ತಾಲ್ಲೂಕಿಗೆ ಶೇ 72ರಷ್ಟು ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ತಿಳಿಸಿದ್ದಾರೆ.
ಪಟ್ಟಣದ ಸರ್ವೋದಯಾ ಶಾಲೆಯ ಅಯಾನ್ ಖಾನ್ 622 (ಶೇ 99.5) ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ಟೆಲ್ಲಾ ಮೆರಿಸ್ ಶಾಲೆಯ ತೇಜಾಶ್ರೀ 621 (ಶೇ 99.3) ದ್ವೀತೀಯಾ ಸ್ಥಾನ, ಹುಲಿಯೂರುದುರ್ಗ ಜ್ಞಾನಭಾರತಿ ಶಾಲೆಯ ಭುವನ್ ಗೌಡ 619 (99.4) ಅಂಕಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ತಾಲ್ಲೂಕಿನ ಆಲ್ಕೆರೆ ಮತ್ತು ಇಪ್ಪಾಡಿ ಸರ್ಕಾರಿ ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.