ADVERTISEMENT

ಕುಣಿಗಲ್: ಲಾಕ್‌ಡೌನ್ ಕರ್ತವ್ಯನಿರತ ಪೊಲೀಸರಿಗೆ ಸಾಥ್ ನೀಡಿದ ಸೈನಿಕರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 12:28 IST
Last Updated 12 ಏಪ್ರಿಲ್ 2020, 12:28 IST
ಕುಣಿಗಲ್ ತಾಲ್ಲೂಕು ಗಡಿಭಾಗ ಅಂಚೇಪಾಳ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರು
ಕುಣಿಗಲ್ ತಾಲ್ಲೂಕು ಗಡಿಭಾಗ ಅಂಚೇಪಾಳ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರು   

ಕುಣಿಗಲ್: ಲಾಕ್‌ಡೌನ್ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ತಾಲ್ಲೂಕಿನ ಮಾಜಿ ಸೈನಿಕರು ಮತ್ತು ರಜೆಗೆಂದು ಬಂದಿರುವ ಸೈನಿಕರು ಸಾಥ್ ನೀಡಿದ್ದಾರೆ.

ಕೊರೊನಾ ನಿಗ್ರಹಿಸಲು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಶ್ರಮವನ್ನು ಶ್ಲಾಘಿಸಿದ ನಿವೃತ್ತ ಸೈನಿಕ ಕೂತಾರಹಳ್ಳಿ ಶಿವಣ್ಣ (ಕಬಡ್ಡಿ ಶಿವಣ್ಣ), ನಿವೃತ್ತ ಸೈನಿಕರು ಸಹ ಕೊರೊನಾ ಕರ್ತವ್ಯಕ್ಕೆ ಸಹಕಾರ ನೀಡುವುದಾಗಿ ಡಿವೈಎಸ್ಪಿ ಜಗದೀಶ್ ಅವರಲ್ಲಿ ಮನವಿ ಮಾಡಿದರು. ಸೈನಿಕರ ಮನವಿಗೆ ಅಧಿಕಾರಿಗಳು ಸಮ್ಮತಿ ನೀಡಿದ ನಂತರ ತಾಲ್ಲೂಕಿನಲ್ಲಿರುವ ನಿವೃತ್ತ ಮತ್ತು ರಜೆ ಮೇಲೆ ಬಂದಿರುವ ಸೈನಿಕರನ್ನು ಸಂಘಟಿಸಿ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.

ಭಾನುವಾರ ಪಿಎಸ್ಐ ವಿಕಾಸ್ ಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಹಕರಿಸಲು ಬಂದ ಸುಮಾರು 20 ಸೈನಿಕರಿಗೆ ತಾಲ್ಲೂಕಿನ ಗಡಿ ಭಾಗದ ಚೆಕ್‌ಪೋಸ್ಟ್ ಯಾವರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಸೂಚನೆ ನೀಡಲಾಯಿತು. ಎಎಸ್ಐ ಮಹಮದ್‌ಗೌಸ್ ಮಾರ್ಗದರ್ಶನದಲ್ಲಿ ಅಂಚೆಪಾಳ್ಯ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರತರಾಗಿದ್ದಾರೆ.

ADVERTISEMENT

ಸದ್ಯಕ್ಕೆ ವಾರಕ್ಕೊಮ್ಮೆ ಎರಡು ಪಾಳಿಯಲ್ಲಿ ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.