ADVERTISEMENT

ಕುಣಿಗಲ್ | ಮದ್ಯದಂಗಡಿ ಹೆಚ್ಚಳದಿಂದ ಕೌಟುಂಬಿಕ ಕಲಹ: ಶಾಸಕ ಡಾ.ರಂಗನಾಥ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:39 IST
Last Updated 6 ಜನವರಿ 2026, 6:39 IST
ಕುಣಿಗಲ್‌ನಲ್ಲಿ ನಡೆದ ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಸತ್ಕರಿಸಲಾಯಿತು
ಕುಣಿಗಲ್‌ನಲ್ಲಿ ನಡೆದ ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಸತ್ಕರಿಸಲಾಯಿತು   

ಕುಣಿಗಲ್: ರಾಜ್ಯದಲ್ಲಿ ಮದ್ಯದ ಅಂಗಡಿಗಳು ಹೆಚ್ಚುತ್ತಿದ್ದು, ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಎಂದು ಶಾಸಕ ಡಾ.ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ನಡೆದ 75ವರ್ಷ ಪೂರೈಸಿದ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ 500 ಮದ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಪ್ರಾರಂಭಿಸಿದೆ. ಇದ್ದಕ್ಕೆ ನನ್ನ ಸಹಮತವಿಲ್ಲ. ಆದರೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವರಮಾನ ತಂದು ಕೊಡುತ್ತಿರುವ ಮದ್ಯ ಜನರಿಗೆ ಸುಲಭದಲ್ಲಿ ಸಿಗದಂತೆ ಮಾಡಬೇಕಿದೆ ಎಂದರು.

ADVERTISEMENT

ನಿವೃತ್ತ ನೌಕರರಿಗೆ ಆರೋಗ್ಯ ಸಂಜೀವಿನಿ ಭಾಗ್ಯ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ನಿವೃತ್ತ ನೌಕರರ ಅಂತ್ಯಕ್ರಿಯೆಗಾಗಿ ಸಂಘದಿಂದ ₹5 ಸಾವಿರ ನೀಡುವ ನಿಧಿಗೆ ₹3 ಲಕ್ಷ ಹಣ ನೀಡಲಾಗುವುದು ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ನಿವೃತ್ತ ನೌಕರರು ಆಲಸ್ಯ ಬಿಟ್ಟು, ಪ್ರವೃತಿಗಳನ್ನು ಬೆಳೆಸಿಕೊಂಡು ಕ್ರಿಯಾಶೀಲರಾಗಿರಬೇಕಿದೆ. ಆರ್ಥಿಕ ಶಿಸ್ತಿನ ಜತೆಗೆ ಆಹಾರ ಪದ್ಧತಿ ಮತ್ತು ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯಾಧ್ಯಕ್ಷ ಎಲ್.ಬೈರಪ್ಪ, ಪ್ರಧಾನ ಕಾರ್ಯದರ್ಶಿ ರಂಗೆಗೌಡ, ವಿ.ಎನ್.ರಾಮಣ್ಣ, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ ತಾಲ್ಲೂಕು ಅಧ್ಯಕ್ಷ ಚನ್ನರಾಯಪ್ಪ, ಪದಾಧಿಕಾರಿಗಳಾದ ಕೆ.ಎ.ಪಿ.ಗುಪ್ತ, ರಾಧಾಕೃಷ್ಣ, ನಾರಾಯಣ, ಶಿವಮ್ಮ, ನಾಗರಾಜು, ಶಿವಣ್ಣ, ಅನಂತ್ ರಾಮ್, ವಿಜಯ್ ಕುಮಾರ್ ಮಾಯಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.