ADVERTISEMENT

ಕುಣಿಗಲ್: ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:19 IST
Last Updated 24 ಜನವರಿ 2026, 7:19 IST
ಕುಣಿಗಲ್ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಕುಣಿಗಲ್ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಕುಣಿಗಲ್: ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ ಶುಕ್ರವಾರ ನಡೆಯಿತು.

ಸದಾ ಕಡತ, ವರದಿ, ಸ್ಥಳ ಪರಿಶೀಲನೆ ಕಾರ್ಯ ಒತ್ತಡದಲ್ಲಿದ್ದ ನೌಕರರು ಕ್ರೀಡಾಕೂಟಕ್ಕೆಂದೆ ಸಿದ್ಧಪಡಿಸಿದ್ದ ಸಮವಸ್ಟ್ರ ಧರಿಸಿ ತಮ್ಮ ನೆಚ್ಚಿನ ಆಟಗಳನ್ನು ಪಾಲ್ಗೊಂಡರು. ಕಾರ್ಯಕ್ರಮವನ್ನು ತಹಶೀಲ್ದಾರ್ ರಶ್ಮೀ ಉದ್ಘಾಟಿಸಿದರು.

ಸಿಪಿಐ ಮಾದ್ಯಾ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ, ನೌಕರರ ಸಂಘದ ಅಧ್ಯಕ್ಷ ಸಿ.ಸಿ.ಶಿವಣ್ಣ, ಕಾರ್ಯದರ್ಶಿ ಶಿವರಾಮಯ್ಯ, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ನವೀನ್, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ರವೀಂದ್ರ, ಗ್ರಾಮಾಡಳಿತಾಧಿಕಾರಿ ಸಂಘದ ಅಧ್ಯಕ್ಷ ವೆಂಕಟೇಶ್ ಪಾಲ್ಗೊಂಡಿದ್ದರು.

ADVERTISEMENT

ಫಲಿತಾಂಶ ವಿವರ: ಕ್ರಿಕೆಟ್‌ನಲ್ಲಿ ಕಂದಾಯ ಇಲಾಖೆಯ ರಘು ತಂಡ ಪ್ರಥಮ ಮತ್ತು ಮಾಸ್ಟರ್ ಮೈಂಡ್ ತಂಡ ದ್ವಿತೀಯ, ಮಹಿಳೆಯರ ವಾಲಿಬಾಲ್‌ನಲ್ಲಿ ಶಿಕ್ಷಣ ಇಲಾಖೆಯ ಸುಧಾ ತಂಡ ಪ್ರಥಮ, ಕಂದಾಯ ಇಲಾಖೆಯ ಭವ್ಯ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ವಾಲಿಬಾಲ್ ಪ್ರಥಮ ದ್ವಿತೀಯ ಸ್ಥಾನ ಪಡೆದರು.

ಥ್ರೋಬಾಲ್ ಮಹಿಳೆಯರಲ್ಲಿ ಕೆ.ಲೀಲಾವತಿ ತಂಡ ಪ್ರಥಮ, ಬಿ.ಆರ್.ಸೌಮ್ಯ ತಂಡವು ದ್ವಿತೀಯ ಸ್ಥಾನ ಪಡೆದಿದೆ. ಚಿತ್ರಗೀತೆ ಸ್ಪರ್ಧೆಯಲ್ಲಿ ಎಸ್.ಕೆ.ಸಿದ್ದಪ್ಪ, ಮಮತ ಪ್ರಥಮ, ಮೋಹನಕುಮಾರ್ ಅಶ್ವಿನಿ ದ್ವಿತೀಯ, ಚೆಲುವೇಗೌಡ, ಮೇಘನಾ ತೃತೀಯ ಸ್ಥಾನ ಪಡೆದರು. ಜಾನಪದ ಗೀತೆಯಲ್ಲಿ ಎ.ಎನ್.ರವೀಶ್, ಅಶ್ವಿನಿ ಪ್ರಥಮ, ಕೆ.ರವಿಕುಮಾರ್, ಎಂ.ಎಲ್. ಶೀಲಾವತಿ ದ್ವಿತೀಯ, ಸಿ.ಆರ್.ಮನೋಜ್, ಪಿ.ಲಲಿತಾ ತೃತೀಯ ಸ್ಥಾನ ಪಡೆದಿದ್ದಾರೆ.

ಏಕಪಾತ್ರಾಭಿನಯ ಜಿ.ಎಚ್.ಹನುಮೇಶ್, ಕೆ.ಎಚ್.ಅನಿತಲಕ್ಷ್ಮಿ ಪ್ರಥಮ, ಸಿ.ಆರ್.ಮನೋಜ್ ದ್ವಿತೀಯ, ಕೆ.ರವಿಕುಮಾರ್ ತೃತೀಯ ಸ್ಥಾನ ಪಡೆದರು. 100 ಮೀ ಓಟದಲ್ಲಿ ರಕ್ಷಿತ, ವೈ.ಎನ್.ವಸಂತಮ್ಮ, ಶಿವಗೊಂಡ ಬೆಳಗಲಿ, ಜಿ.ಕೆ.ಸುರೇಶ್, 200 ಮೀಟರ್ ಓಟದಲ್ಲಿ ಎನ್.ಸಿ.ಮಮತ, ವೈ.ಎನ್.ವಸಂತಮ್ಮ, ಮಂಜುನಾಥ ಬಾರ್ಕೆ, 400 ಮೀಟರ್ ಓಟದಲ್ಲಿ ರಮ್ಯ, ವೇದಾವತಿ, ನವೀನ ಪ್ರಥಮ ಬಹುಮಾನ ಪಡೆದಿದ್ದಾರೆ.

ಗುಂಡು ಎಸೆತ ಸ್ಪರ್ಧೆಯಲ್ಲಿ ಎಂ.ಸಿ.ಲೀಲಾವತಿ, ಬಿ.ಎಲ್.ಬಸವರಾಜು, ಟಿ.ಎಚ್.ಹನುಮೇಶ್ ಪ್ರಥಮ ಬಹುಮಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.