ADVERTISEMENT

ಪಾವಗಡ: ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:48 IST
Last Updated 4 ಮಾರ್ಚ್ 2026, 6:48 IST
ಪಾವಗಡ ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ ನಡೆಯಿತು
ಪಾವಗಡ ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ ನಡೆಯಿತು   

ಪಾವಗಡ: ತುಮಕೂರು ರಸ್ತೆಯ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳನ್ನು ಶೀಘ್ರವೇ ಮುಗಿಸಿ ರಥೋತ್ಸವ ಆಚರಣೆಯನ್ನೂ ಬೆಳಿಗ್ಗೆಯೇ ಸಂಪನ್ನಗೊಳಿಸಲಾಯಿತು.

ಸೋಮವಾರ ರಾತ್ರಿ ನಡೆದ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ADVERTISEMENT

ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ, ಅಭಿಷೇಕಾದಿ ಪೂಜಾ ಕಾರ್ಯಕ್ರಮಗಳು ನಡೆದವು. ಅಲಂಕೃತ ಲಕ್ಷ್ಮಿ ನರಸಿಂಹ ಉತ್ಸವ ಮೂರ್ತಿಗಳನ್ನು ಛತ್ರ, ಚಾಮರ, ವಾದ್ಯವೃಂದದೊಂದಿಗೆ ಬಗೆ ಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದ ಬ್ರಹ್ಮ ರಥದ ಬಳಿ ಮೆರವಣಿಗೆ ಮೂಲಕ ಕರೆತರಲಾಯಿತು.

ನಂತರ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ್ ವೈ.ರವಿ, ಉಪ ತಹಶೀಲ್ದಾರ್ ಪ್ರಸಾದ್ ರಥೋತ್ಸವಕ್ಕೆ ಚಾಲನೆ ನೀಡಿದರು.

ಕೂಡಲೇ ದೇಗುಲದ ಬಳಿ ನೆರೆದಿದ್ದ ಸಹಸ್ರಾರು ಭಕ್ತರು ಲಕ್ಷ್ಮೀ ನಾರಸಿಂಹಾಯ ನಮಃ ಎಂದು ರಥದತ್ತ ಬಾಳೆ ಹಣ್ಣುಗಳನ್ನು ಎಸೆದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಸುರೇಶ್, ಕಂದಾಯ ನಿರೀಕ್ಷಕ ರಾಜಗೋಪಾಲ್, ಕಿರಣ್ ಕುಮಾರ್, ವಿಶ್ವನಾಥ್‌, ದೇಗುಲ ಪದಾಧಿಕಾರಿಗಳಾದ ಮಾದವನ್‌, ಶ್ರೀಕೃಷ್ಣ, ವಿ. ಸುಬ್ಬನರಸಿಂಹ, ರಘುನಾಥಶರ್ಮ, ನರಸಿಂಹನಾಯಕ, ಎಸ್‌.ಎನ್‌. ನಾಗರಾಜು, ದೇಗುಲದ ಅರ್ಚಕ ನರಸಿಂಹಗೋಪಾಲ್‌, ಅನಿಲ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.