
ತುಮಕೂರು: ಭೂಮಿ ಸ್ವಾಧೀನ ಪಡಿಸಿಕೊಂಡು ಸೂಕ್ತ ಪರಿಹಾರ ನೀಡದ ನಗರದ ತುಮಕೂರು–ರಾಯದುರ್ಗ, ತುಮಕೂರು–ದಾವಣಗೆರೆ ರೈಲು ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿ ಪೀಠೋಪಕರಣವನ್ನು ಬುಧವಾರ ಜಪ್ತಿ ಮಾಡಲಾಯಿತು.
ತಾಲ್ಲೂಕಿನ ಹರಿಯಪ್ಪನಹಳ್ಳಿ ಗ್ರಾಮದ ರೈತ ಚಿಕ್ಕವೀರಯ್ಯ ಅವರ ಜಮೀನನ್ನು ತುಮಕೂರು– ದಾವಣಗೆರೆ ರೈಲು ಮಾರ್ಗಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಸರ್ಕಾರ ನಿಗದಿಪಡಿಸಿದಂತೆ ₹70 ಲಕ್ಷ ಪರಿಹಾರ ನೀಡಲಾಗಿತ್ತು. ಮಾರುಕಟ್ಟೆಯ ದರ ನೀಡುವಂತೆ ಚಿಕ್ಕವೀರಯ್ಯ ಕೋರ್ಟ್ ಮೊರೆ ಹೋಗಿದ್ದರು.
ಮೂರು ತಿಂಗಳ ಒಳಗೆ ₹1.30 ಕೋಟಿ ಹೆಚ್ಚುವರಿ ಪರಿಹಾರ ನೀಡುವಂತೆ ತುಮಕೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು. ಪರಿಹಾರ ನೀಡದ ಕಾರಣ ಕಚೇರಿಯ ಕುರ್ಚಿ, ಟೇಬಲ್ ಇತರೆ ಪೀಠೋಪಕರಣ ಜಪ್ತಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.