ADVERTISEMENT

ಅಪರಿಚಿತ ವಾಹನ ಡಿಕ್ಕಿ: ಗಾಯಗೊಂಡ ಮರಿ ಚಿರತೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 13:42 IST
Last Updated 27 ಮೇ 2019, 13:42 IST
ಕ್ಯಾಮೆರಾದತ್ತ ಗುರಾಯಿಸುತ್ತಲೇ ಫೋಸು ನೀಡಿದ ಮರಿ ಚಿರತೆ
ಕ್ಯಾಮೆರಾದತ್ತ ಗುರಾಯಿಸುತ್ತಲೇ ಫೋಸು ನೀಡಿದ ಮರಿ ಚಿರತೆ   

ಹುಲಿಯೂರುದುರ್ಗ (ತುಮಕೂರು): ಹಳೇಪೇಟೆ ಹೊರವಲಯದ ಕುಣಿಗಲ್- ಮದ್ದೂರು ಹೆದ್ದಾರಿಯಲ್ಲಿ ಇರುವ ವೇಯಿಂಗ್ ಬ್ರಿಡ್ಜ್ ಸಮೀಪ ಭಾನುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಒಂದು ವರ್ಷ ಪ್ರಾಯದ ಗಂಡು ಚಿರತೆ ಮರಿ ತೀವ್ರವಾಗಿ ಗಾಯಗೊಂಡಿದೆ.

ರಸ್ತೆ ಬದಿಯಲ್ಲಿ ಗಾಯಗೊಂಡು ‌ನರಳುತ್ತ ಬಿದ್ದಿರುವ ಮಾಹಿತಿ ತಿಳಿದು ಅರಣ್ಯ ಇಲಾಖಾ ಸಿಬ್ಬಂದಿ ಸಂರಕ್ಷಿಸಿದ್ದಾರೆ.

‘ಕಾಲು, ಬಾಯಿ ಹಾಗೂ ಮುಖದ ಭಾಗಗಳಲ್ಲಿ ಗಾಯಗಳಾಗಿದ್ದು, ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ್ ಚಿಕಿತ್ಸೆ ನೀಡಿದ್ದಾರೆ. ನಂಜು ಹಾಗೂ ನೋವು ನಿವಾರಕ ಚುಚ್ಚುಮದ್ದು ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಬೇಟೆ ಆಡಿಯೇ ತಿನ್ನುವ ಸಹಜ ಸ್ವಭಾವ ತೋರಿದ ಚಿರತೆಯ ಮರಿ ಸ್ವಲ್ಪವೇ ಮಾಂಸದ ತುಣುಕನ್ನು ಸೇವಿಸಿತು’ ಎಂದು ವಲಯ ಅರಣ್ಯಾಧಿಕಾರಿ ಸಿ.ರವಿ ‘ಪ್ರಜಾವಾಣಿ’ ಗೆ ತಿಳಿಸಿದರು.

ADVERTISEMENT

ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಚಿಕಿತ್ಸಾಲಯಕ್ಕೆ ಒಪ್ಪಿಸಲು ಕ್ರಮವಹಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.