ADVERTISEMENT

ಕುಣಿಗಲ್: ಚಿರತೆ ದಾಳಿಗೆ ಬಾಲಕ ಬಲಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 14:18 IST
Last Updated 11 ಜುಲೈ 2020, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ರಾಜೇಂದ್ರಪುರದ ಕಟ್ಟೆಬಳಿ ಶನಿವಾರ ಮಧ್ಯಾಹ್ನ ಆಟವಾಡುತ್ತಿದ್ದ ಬಾಲಕ ಚಂದು (4) ಮೇಲೆ ದಾಳಿ ನಡೆಸಿದ ಚಿರತೆ ಆತನನ್ನು ಕೊಂದು ಹಾಕಿದೆ.

ಚಂದು ತಾಯಿ ದೋಡ್ಡೀರಮ್ಮನ ಜತೆ ಗ್ರಾಮದ ಕಟ್ಟೆ ಬಳಿ ಬಟ್ಟೆ ತೊಳೆಯಲು ತೆರಳಿದ್ದ.ದೋಡ್ಡೀರಮ್ಮ ಬಟ್ಟೆ ತೊಳೆಯುತ್ತಿರುವಾಗಲೇ ಪಕ್ಕದಲ್ಲಿದ್ದ ಕಾಡಿನಿಂದ ಬಂದ ಚಿರತೆ ಬಾಲಕನ ಮೇಲೆ ದಾಳಿ ಮಾಡಿ ಎಳೆದೊಯ್ದಿದೆ. ಮಗುವಿನ ಚೀರಾಟ ಕೇಳಿ ತಾಯಿ ಮತ್ತು ಸ್ಥಳದಲ್ಲಿದ್ದ ಶಿವಣ್ಣ ಹಿಂಬಾಲಿಸಿದಾಗ ಸ್ವಲ್ಪ ದೂರದಲ್ಲಿದ್ದ ಹೊಲದಲ್ಲಿ ಚಿರತೆ ಮಗುವನ್ನು ಬಿಟ್ಟು ಹೋಗಿದೆ. ತಾಯಿ ಹೋಗಿ ನೋಡುವ ಸಮಯದಲ್ಲಿ ಮಗು ಮೃತಪಟ್ಟಿದೆ.

ಬಾಲಕನ ಸಾವಿಗೆ ಸಂತಾಪ ಸೂಚಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ₹ 7.5ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಚಿರತೆಯ ದಾಳಿಗೆ ಇದು ಎರಡನೇ ಬಲಿಯಾಗಿದೆ. ದೊಡ್ಡಮಳಲವಾಡಿಯಲ್ಲಿ ವೃದ್ಧೆ ಬಲಿಯಾಗಿದ್ದರು. ಕಳೆದ ತಿಂಗಳು ತರೆದಕುಪ್ಪೆಯಲ್ಲಿ ಬಾಲಕಿ ಮೇಲೆ ಚಿರತೆ ದಾಳಿ ಮಾಡಿ ತೀವ್ರ ಗಾಯಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.