
ಪ್ರಜಾವಾಣಿ ವಾರ್ತೆ
ಚಿರತೆ
ತಿಪಟೂರು: ತಾಲ್ಲೂಕಿನ ರಾಮಶೆಟ್ಟಿಹಳ್ಳಿಯ ಬಳಿ ರಾಜಣ್ಣ ಎಂಬುವರ ಮೇಲೆ ಚಿರತೆ ದಾಳಿ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಸಂಜೆ ಕುರಿ ಮೇಯಿಸಿಕೊಂಡು ಮನೆಗೆ ಬರುವಾಗ ಚಿರತೆ ದಾಳಿ ಮಾಡಿದೆ. ಕುತ್ತಿಗೆ ಮತ್ತು ಬಲಗೈಗೆ ಕಚ್ಚಿದೆ. ಸ್ಥಳೀಯರು ರಾಜಣ್ಣ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ಮಧು ಆಸ್ಪತ್ರೆಗೆ ಭೇಟಿ ನೀಡಿ ರಾಜಣ್ಣ ಆರೋಗ್ಯ ವಿಚಾರಿಸಿದರು. ರಾಮಶೆಟ್ಟಿಹಳ್ಳಿ ಭಾಗದಲ್ಲಿ ಹಲವು ದಿನಗಳಿಂದ ಚಿರತೆ ಕಾಟ ಹೆಚ್ಚಾಗಿದೆ. ಚಿರತೆ ಸೆರೆಗೆ ಬೋನು ಅಳವಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.