ಗುಬ್ಬಿ: ನಿಟ್ಟೂರು ಹೋಬಳಿ ಎನ್.ನಂದಿಹಳ್ಳಿಪಾಳ್ಯದ ಗಂಗಾ ಕ್ಷೇತ್ರದ ಬಳಿ ಸೋಮವಾರ ಬೆಳಗಿನಜಾವ 4 ವರ್ಷದ ಗಂಡು ಚಿರತೆ ಅರಣ್ಯಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಇತ್ತೀಚೆಗೆ ಈ ಭಾಗದಲ್ಲಿ ಚಿರತೆಯು ನಾಯಿ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಆಯಕಟ್ಟಿನ ಜಾಗದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವುದರಿಂದ ಸುತ್ತಮುತ್ತಲಿನ ಜನರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದರೂ, ಇನ್ನೂ ಸಾಕಷ್ಟು ಚಿರತೆಗಳು ಇವೆ ಎಂಬ ಆತಂಕದಲ್ಲಿ ನಾಗರಿಕರು ಇದ್ದಾರೆ.
ಅರಣ್ಯ ಇಲಾಖೆ ತುರ್ತು ಕ್ರಮವಹಿಸಿ ಚಿರತೆ ಹಿಡಿಯಲು ಮುಂದಾಗಬೇಕಿದೆ. ಇಲ್ಲವಾದಲ್ಲಿ ಜನ, ಜಾನುವಾರುಗಳು ತಿರುಗಾಡಲು ಕಷ್ಟವಾಗುವುದು. ಇಲಾಖೆಯವರು ಬೋನಿಗೆ ಬಿದ್ದ ಚಿರತೆಗಳನ್ನು ದೂರದ ಆರಣ್ಯಕ್ಕೆ ಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.