ADVERTISEMENT

ಉನ್ನತ ಶಿಕ್ಷಣ ಕೌಶಲಾಧಾರಿತವಾಗಿರಲಿ: ಪ್ರೊ.ಎಂ.ರಾಮಚಂದ್ರಗೌಡ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 9:17 IST
Last Updated 27 ಸೆಪ್ಟೆಂಬರ್ 2019, 9:17 IST
ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರೊ.ವೈ.ಎಸ್.ಸಿದ್ಧೇಗೌಡ, ಪ್ರೊ.ಗಂಗಾ ನಾಯಕ್, ಪ್ರೊ.ಪಿ.ಪರಮಶಿವಯ್ಯ, ಪ್ರೊ.ಬಿ.ಶೇಖರ್,ಪ್ರೊ.ಜಿ.ಸುದರ್ಶನರೆಡ್ಡಿ,ಡಾ.ಎಸ್.ದೇವರಾಜಪ್ಪ ಇದ್ದರು
ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರೊ.ವೈ.ಎಸ್.ಸಿದ್ಧೇಗೌಡ, ಪ್ರೊ.ಗಂಗಾ ನಾಯಕ್, ಪ್ರೊ.ಪಿ.ಪರಮಶಿವಯ್ಯ, ಪ್ರೊ.ಬಿ.ಶೇಖರ್,ಪ್ರೊ.ಜಿ.ಸುದರ್ಶನರೆಡ್ಡಿ,ಡಾ.ಎಸ್.ದೇವರಾಜಪ್ಪ ಇದ್ದರು   

ತುಮಕೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಅನಿವಾರ್ಯ ಎಂದು ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ರಾಮಚಂದ್ರ ಗೌಡ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಎಂ.ಕಾಂ (ಇನ್‌ಫಾರ್ಮೇಷನ್ ಸಿಸ್ಟಮ್‌) ಹೊಸ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ವ್ಯವಸ್ಥೆಯಲ್ಲಿರುವ ಕೋರ್ಸ್‌ಗಳು ಕೇವಲ ಸರ್ಟಿಫಿಕೇಟ್ ನೀಡಲು ಸೀಮಿತವಾಗಿವೆ. ವೃತ್ತಿ ಜೀವನಕ್ಕೆ ಅವಶ್ಯವಾಗಿರುವ ಕೌಶಲ್ಯಗಳನ್ನು ನೀಡುತ್ತಿಲ್ಲ ಎಂದರು.

ADVERTISEMENT

ನಮ್ಮ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದು ಹೊರಬರುತ್ತಿರುವವರಲ್ಲಿ ಶೇ 10ರಷ್ಟು ಜನರು ಮಾತ್ರ ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ. ಈ ನಿಟ್ಟಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾಗಿರುವ ನೂತನ ಕೋರ್ಸ್ ತನ್ನ ಪ್ರಾಯೋಗಿಕ ಆಯಾಮಗಳಿಂದ ಸಹಕಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ ಎಸ್ ಸಿದ್ದೇಗೌಡ ಮಾತನಾಡಿ, ’ನಮ್ಮ ಕೈಗೆಟುಕುವ ಸಂಪನ್ಮೂಲಗಳನ್ನು ಬಳಸಿಕೊಂಡೇ ನಮ್ಮ ಗುರಿ ಸಾಧಿಸಲು ಸಾಧ್ಯವಿದೆ’ ಎಂದರು.

ಕುಲಸಚಿವ ಪ್ರೊ. ಕೆ. ಎನ್. ಗಂಗಾ ನಾಯಕ್, ಹಣಕಾಸು ಅಧಿಕಾರಿ ಪ್ರೊ. ಪಿ.ಪರಮಶಿವಯ್ಯ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಶೇಖರ್, ಪ್ರಾಧ್ಯಾಪಕ ಡಾ.ಜಿ.ಸುದರ್ಶನ ರೆಡ್ಡಿ, ಕೋರ್ಸ್ ಸಂಯೋಜಕ ಡಾ.ಎಸ್.ದೇವರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.