ADVERTISEMENT

ಅರಣ್ಯ ಸಂಪತ್ತು ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಇರಲಿ

ತುಮಕೂರು ರೋಟರಿ ಸಿಟಿ ಸಂಸ್ಥೆಯ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಡಾ.ಎಂ.ಎನ್.ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 8:39 IST
Last Updated 19 ಜುಲೈ 2019, 8:39 IST
ರೋಟರಿ ತುಮಕೂರು ಸಿಟಿ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಎಸ್‌ಐಟಿ ಕಾಲೇಜಿನ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಅವರಿಗೆ ‘ವಿಶೇಷ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎಚ್.ಕೆ.ವಿ.ರೆಡ್ಡಿ, ವಿ.ಎಸ್.ಕೆ.ಸ್ವಾಮಿ, ಜಯಪ್ಪ, ಪ್ರವೀಣ್ ಷಾ, ಸುರೇಂದ್ರ ಷಾ, ಕೆ.ಜಿ.ಶಿವಕುಮಾರ್ ಇದ್ದರು
ರೋಟರಿ ತುಮಕೂರು ಸಿಟಿ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಎಸ್‌ಐಟಿ ಕಾಲೇಜಿನ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಅವರಿಗೆ ‘ವಿಶೇಷ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಎಚ್.ಕೆ.ವಿ.ರೆಡ್ಡಿ, ವಿ.ಎಸ್.ಕೆ.ಸ್ವಾಮಿ, ಜಯಪ್ಪ, ಪ್ರವೀಣ್ ಷಾ, ಸುರೇಂದ್ರ ಷಾ, ಕೆ.ಜಿ.ಶಿವಕುಮಾರ್ ಇದ್ದರು   

ತುಮಕೂರು: ‘ಪ್ರತಿಯೊಬ್ಬರೂ ಪರಿಸರ ಕಾಳಜಿ ಮೆರೆಯಬೇಕು. ಅಮೂಲ್ಯವಾದ ಅರಣ್ಯ ಸಂಪತ್ತು ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ತಿಳಿಸಿದರು.

ರೋಟರಿ ತುಮಕೂರು ಸಿಟಿ ಘಟಕದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.

‘ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಅಂತರ್ಜಲ ಕುಸಿತವಾಗಿದೆ. ಕುಡಿಯುವ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

ADVERTISEMENT

‘ಪರಿಸರ ನಾಶ, ಮಾಲಿನ್ಯದಿಂದ ಭೂಮಿಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಪರಿಸರ ಕಾಳಜಿ ಪ್ರಜ್ಞೆ ಮೂಡಿಸಬೇಕು. ಶಿಕ್ಷಣಕ್ಕೆ ಒತ್ತು ಕೊಡಬೇಕು’ ಎಂದರು.

ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಿದ ತುಮಕೂರು ರೋಟರಿ ಜಿಲ್ಲಾ ಗವರ್ನರ್ ಎಚ್.ಕೆ.ವಿ.ರೆಡ್ಡಿ, ‘ಪ್ರಾಮಾಣಿಕ ಸೇವೆಯೇ ಸಂಸ್ಥೆಯ ಮೂಲ ತತ್ವವಾಗಿದೆ. ಈ ವರ್ಷದ ರಾಷ್ಟ್ರಮಟ್ಟದಲ್ಲಿ ಕೋಟಿ ನಾಟಿ ಎಂಬ ಬೃಹತ್ ಪರಿಸರ ಯೋಜನೆ ಹಾಕಿಕೊಳ್ಳಲಾಗಿದೆ. ಸಾಧ್ಯವಿರುವ ಕಡೆಯಲ್ಲೆಲ್ಲ ಗಿಡಗಳನ್ನು ನೆಡುವ ಯೋಜನೆ ಇದಾಗಿದೆ’ ಎಂದು ಹೇಳಿದರು.

ನೂತನ ಅಧ್ಯಕ್ಷ ವಿ.ಎಸ್.ಕೆ.ಸ್ವಾಮಿ ಮಾತನಾಡಿ, ‘ರೋಟರಿ ಸಂಸ್ಥೆ 11ನೇ ವರ್ಷಕ್ಕೆ ಕಾಲಿಟ್ಟಿದೆ. ಸಂಸ್ಥೆಯ ಸೇವಾ ಗುರಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಹಲವಾರು ಜನಪರ ಕೆಲಸಗಳನ್ನು ಮಾಡುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಡಾ.ಎಂ.ಎನ್.ಚನ್ನಬಸಪ್ಪ ಅವರಿಗೆ ವಿಶೇಷ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಸಿಗಳನ್ನು ನೆಡಲಾಯಿತು.

ರೋಟರಿ ಅಧ್ಯಕ್ಷ ವಿ.ಎಸ್.ಕೆ.ಸ್ವಾಮಿ, ಕಾರ್ಯದರ್ಶಿ ಜಯಪ್ಪ, ಪ್ರವೀಣ್ ಷಾ, ಸುರೇಂದ್ರ ಷಾ, ಕೆ.ಜಿ.ಶಿವಕುಮಾರ್, ಜಿ.ವಿ.ಸಚಿನ್, ಬಿ.ಆರ್.ರಮೇಶ್, ರವೀಶ್‌ಕುಮಾರ್ ಮತ್ತು ರೋಟರಿ ಎಲ್ಲಾ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.