
ಮಧುಗಿರಿ: ಭೂಮಾಪಕರ ಬೇಡಿಕೆ ಈಡೇರಿಸುವ ತನಕ ಕೆಲಸ ಸ್ಥಗಿತಗೊಳಿಸುವುದಾಗಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಿಂದ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹಿಂದೆ ಹಲವು ಬಾರಿ ಲಿಖಿತ ಹಾಗೂ ಮೌಖಿಕವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ. ಆದರೂ ಈಡೇರಿಲ್ಲ. ನಾವು ಮಾಡಿರುವ ಆನ್‌ಲೈನ್ ಘಟಕಗಳ ಸಂಭಾವನೆ ಇದುವರೆಗೂ ಕಚೇರಿಗೆ ನೀಡಿರುವ ಕಡತಗಳಿಗೆ ಸರಿಯಾದ ಸಂಭಾವನೆ ನೀಡಿಲ್ಲ. ಬೇಡಿಕೆಗಳು ಈಡೇರಿಕೆಗೆ ಶುಕ್ರವಾರದಿಂದಲೇ ರಾಜ್ಯದಾದ್ಯಂತ ಮುಷ್ಕರ ಕೈಗೊಳ್ಳಲು ತೀರ್ಮಾನಿಸಿದ್ದು, ರೈತರಿಗೆ ತೊಂದರೆಯಾಗದಂತೆ ಮಧುಗಿರಿ ತಾಲ್ಲೂಕಿನ ಎಲ್ಲ ಪರವಾನಿಗೆ ಭೂಮಾಪಕರ ಲಾಗಿನ್‌ನಲ್ಲಿ ಇರುವ ಕಡತಗಳನ್ನು ಹಿಂಪಡೆಯಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಾಲ್ಲೂಕು ಭೂಮಾಪಕರ ಸಂಘದ ಸಂತೋಷ್, ರಾಮಕೃಷ್ಣ, ಮಂಜೇಶ್, ನಂಜೇಶ್, ರಂಗನಾಥ್ , ರಮೇಶ್, ಮುತ್ತುರಾಜು, ನವೀನ್ ಕುಮಾರ್, ಅರವಿಂದ, ಮಹೇಶ್, ದಿವ್ಯಶ್ರೀ, ವಂದನ, ಕುಮಾರ್, ರವಿ, ಇಮ್ರಾನ್, ವೇಣು, ಗುರುಮೂರ್ತಿ, ಸುರೇಶ್, ವಿದ್ಯಾ, ಅಶ್ವತ್ ನಾರಾಯಣ್, ರವಿಕುಮಾರ್, ರಮೇಶ್, ರಾಜೇಶ್, ಪರಮೇಶ್, ಗೋವಿಂದರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.