ADVERTISEMENT

ತುಮಕೂರು ಕ್ಷೇತ್ರಕ್ಕೆ ಅನ್ಯಾಯ ಸಹಿಸಲ್ಲ: ಜಿಲ್ಲಾ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:42 IST
Last Updated 2 ಮೇ 2019, 10:42 IST
ತುಮಕೂರು ಲೋಕ ಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ತುಮಕೂರು ಲೋಕ ಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ತುಮಕೂರು: ರಾಜ್ಯದಲ್ಲಿ ಹತ್ತು ಹಾಲಿ ಕಾಂಗ್ರೆಸ್ ಸಂಸದರಿದ್ದು, ಮುದ್ದಹನುಮೇಗೌಡರಿಗೆ ಮಾತ್ರ ಟಿಕೆಟ್ ಕೊಡದೇ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಈ ಅನ್ಯಾಯ ಸಹಿಸಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,' ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು. ಮಾ 16ರಂದು ನಡೆಯುವ ಪಕ್ಷದ ವರಿಷ್ಠರ ಸಭೆಯಲ್ಲಿ ನಿರ್ಧಾರ ಮರುಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.

ಬೇರೆ ಕ್ಷೇತ್ರಕ್ಕೊಂದು ನಿರ್ಧಾರ. ನಮ್ಮ ಕ್ಷೇತ್ರಕ್ಕೊಂದು ನಿರ್ಧಾರ ಯಾಕೆ? ಪಕ್ಷಕ್ಕೆ ಇಲ್ಲಿ ದೊಡ್ಡ ಪೆಟ್ಟು ಬೀಳಲಿದೆ. ಹಾಲಿ ಸಂಸದರೂ ಸಮರ್ಥರಿದ್ದು ಅವರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಿದರು.

ADVERTISEMENT

ನಮಗೆ ಹಸ್ತಕ್ಕೆ ಮತ ಹಾಕಿಸುವುದು ಗೊತ್ತು. ಬೇರೆಯವರಿಗೆ, ಬೇರೆ ಪಕ್ಷದವರಿಗೆ ಮತ ಕೇಳುವುದು ಗೊತ್ತಿಲ್ಲ. ಇದನ್ನೇ ನಮ್ಮ ಮುಖಂಡರಿಗೆ ತಿಳಿಸಿದ್ದೇವೆ ಎಂದು ಹಿರಿಯ ಮುಖಂಡ ಷಫೀ ಅಹಮ್ಮದ್ ಹೇಳಿದರು.

ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಮಾತನಾಡಿ, ' ಜೆಡಿಎಸ್ ಗೆ ಕ್ಷೇತ್ರ ಬಿಟ್ಟು ಕೊಟ್ಟಿರುವುದು ಯಾವ ಕಾರಣಕ್ಕೆ ಎಂಬುದೇ ಗೊತ್ತಾಗುತ್ತಿಲ್ಲ. ಹಾಲಿ ಸಂಸದರಿದ್ದೂ ಬಿಟ್ಟು ಕೊಟ್ಟಿರುವುದು ಬೇರೆ ಬೇರೆ ರೀತಿಯಲ್ಲಿ ಸಂದೇಶ ಹೋಗುತ್ತದೆ. ಹೀಗಾಗಿ ಕಾಂಗ್ರೆಸ್ ನಿಂದ ಮುದ್ದ ಹನುಮೇಗೌಡರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.