ತುಮಕೂರು: ನಗರದ ಎಸ್.ಎಸ್.ಪುರಂ ನಿವಾಸಿ ಕೆ.ಎಸ್.ರಮೇಶ್ (55) ಎಂಬುವರು ಮತದಾನದ ನಂತರ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.
ನಮ್ಮೂರ ಆಹಾರ ಮಳಿಗೆ ಬಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿ, ಬೆಳಗ್ಗೆ 11.30 ಗಂಟೆಗೆ ತಮ್ಮ ‘ಎಫ್ ಸ್ಕೊಯರ್’ ಬಟ್ಟೆ ಮಾರಾಟ ಅಂಗಡಿಗೆ ತೆರಳಿದ್ದರು. ಅಂಗಡಿಯಲ್ಲಿ ಹೃದಯಾಘಾತದಿಂದ ಕುಸಿದು ಸಾವನ್ನಪ್ಪಿದ್ದಾರೆ. ಹೊಸ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.