ADVERTISEMENT

ಪ್ರಜ್ಞಾವಂತ ಮತದಾರರಿಗೂ ಆಮಿಷ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 4:10 IST
Last Updated 28 ಅಕ್ಟೋಬರ್ 2020, 4:10 IST
ಮತದಾರರಿಗೆ ಹಂಚಿಕೆಯಾದ ಬೆಳ್ಳಿ ಲೇಪನದ ದೇವರ ಪಟಗಳು
ಮತದಾರರಿಗೆ ಹಂಚಿಕೆಯಾದ ಬೆಳ್ಳಿ ಲೇಪನದ ದೇವರ ಪಟಗಳು   

ಕುಣಿಗಲ್: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಜ್ಞಾವಂತ ಮತದಾರರಿಗೂ ಅಭ್ಯರ್ಥಿಗಳ ಪರವಾಗಿ ಬಂದವರು ಉಟೋಪಾಚರ, ಉಡುಗೊರೆ ವ್ಯವಸ್ಥೆ ಮಾಡುವುದರ ಮೂಲಕ ಆಮಿಷ ವೊಡ್ಡಿದ್ದಾರೆ.

ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗ ಬಯಸಿದ್ದ ಕುಣಿಗಲ್ ಮೂಲದ ನಂಜುಂಡ ಪ್ರಸಾದ್, ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾರರ ನೋಂದಣಿ ಮಾಡಿಸಿದ್ದರು. ಟಿಕೆಟ್ ದೊರೆಯದೆ ಕಾರಣ ಬಿಜೆಪಿ ಸೇರಿ, ಅಭ್ಯರ್ಥಿ ಚಿದಾನಂದ ಗೌಡ ಪರ ಪ್ರಚಾರ ಆರಂಭಿಸಿದ್ದಾರೆ.

ಅಭ್ಯರ್ಥಿಗಳಿಗೆ ಮತದಾರನ ಪರಿಚಯವಿದ್ದರೂ, ನೇರವಾಗಿ ಮತಯಾಚಿಸಲಾಗದೆ, ಮಧ್ಯವರ್ತಿ ಮತ್ತು ಪಕ್ಷದ ಮುಖಂಡರ ಮೂಲಕ ಮತಯಾಚಿಸುವ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಪಕ್ಷದ ಮುಖಂಡರುಗಳಿಗೆ ಜವಾಬ್ದಾರಿ ನೀಡಲಾಗಿದೆ. ಶಾಸ್ತ್ರಕ್ಕೆ ಎಂಬಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜಿಡಿಎಸ್ ಅಭ್ಯರ್ಥಿಗಳು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮತಯಾಚಿಸಿದ್ದಾರೆ.

ADVERTISEMENT

ಪ್ರಜ್ಞಾವಂತರೆಂದು ಕರೆಯುವ ಕೆಲ ಮತದಾರರಿಗೆ ರಂಗಸ್ವಾಮಿ ಗುಡ್ಡದಲ್ಲಿ, ಹೊರವಲಯದ ಪಾರ್ಮ ಹೌಸ್ ಮತ್ತು ಪ್ರತಿಷ್ಠಿತ ಹೊಟೆಲ್‌ಗಳಲ್ಲಿ ಊಟೊಪಚಾರದ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಕೆಲವು ಮತದಾರರು ಉಡುಗೊರೆ ಬೇಡ ಹಣ ಮಾತ್ರ ಗೌಪ್ಯವಾಗಿ ನೀಡಿ ಎಂದು ಕೇಳಿ ಪಡೆದಿದ್ದಾರೆ ಎನ್ನಲಾಗುತ್ತದೆ.

ತಾಲ್ಲೂಕಿನಲ್ಲಿ 1,331 ಮತದಾರರಿದ್ದು, 6 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣೆ ಶಾಖೆಯ ಮೂಲಗಳು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.